

ನವದೆಹಲಿ: ಆತಿಥೇಯ ಭಾರತದ ಎಚ್ಎಸ್ ಪ್ರಣಯ್ ಮತ್ತು ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ಇಂಡಿಯಾ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಸಿಂಗಲ್ಸ್ ವಿಭಾಗದಲ್ಲಿ ಪ್ರಣಯ್ ದೇಶಬಾಂಧವ ಪ್ರಿಯಾಂಶು ರಾಜಾವತ್ ಎದುರು 20-22, 21-14, 21-14ರಿಂದ ಹೋರಾಟಯುತ ಗೆಲುವು ಸಾಧಿಸಿದರೆ, ಡಬಲ್ಸ್ ವಿಭಾಗದಲ್ಲಿ ವಿಶ್ವ ನಂ. 2 ಚಿರಾಗ್-ಸಾತ್ವಿಕ್ ಜೋಡಿ 21-14, 21-15ರಿಂದ ತೈವಾನ್ನ ಲು ಚಿನ್ ಯಾವೊ&ಯಂಗ್ ಪೊ ಹಾನ್ ಜೋಡಿಯನ್ನು ಮಣಿಸಿತು.