

ಪ್ಯಾರಿಸ್: ಕರೊನಾ ವೈರಸ್ ಭೀತಿಯಿಂದಾಗಿ ಎಲ್ಲ ಕ್ರೀಡೆಗಳು ಸ್ತಬ್ಧಗೊಂಡಿರುವ ನಡುವೆ ಕೆಲ ಕ್ರೀಡಾಪಟುಗಳು ಆನ್ಲೈನ್ ಟೂರ್ನಿಗಳ ಮೂಲಕ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ.
ಇದೀಗ ಅಥ್ಲೆಟಿಕ್ಸ್ನಲ್ಲೂ ಇಂಥ ಸ್ಪರ್ಧೆಗೆ ವೇದಿಕೆ ಸಜ್ಜಾಗಿದ್ದು, ವಿಶ್ವದ ಅಗ್ರ ಮೂವರು ಪೋಲ್ ವಾಲ್ಟ್ ಸ್ಪರ್ಧಿಗಳು ಮನೆಯಿಂದಲೇ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ‘ಅಲ್ಟಿಮೇಟ್ ಗಾರ್ಡನ್ ಕ್ಲ್ಯಾಷ್’ ಹೆಸರಿನಲ್ಲಿ ಭಾನುವಾರ ಲೈವ್ ವಿಡಿಯೋ ಲಿಂಕ್ ಮೂಲಕ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ವೀಡನ್ನ ವಿಶ್ವ ದಾಖಲೆ ಒಡೆಯ ಡುಪ್ಲಾಂಟಿಸ್ ಲೌಸಿಯಾನಾದಲ್ಲಿ, ಅಮೆರಿಕದ 2 ಬಾರಿಯ ವಿಶ್ವ ಚಾಂಪಿಯನ್ಸ್ಯಾಮ್ ಕೆಂಡ್ರಿಕ್ಸ್ ಮತ್ತು ಫ್ರಾನ್ಸ್ನ ರೆನೌಡ್ ಲಾವಿಲ್ಲೆನಿ ತಮ್ಮ ಮನೆಯ ಗಾರ್ಡನ್ನಲ್ಲಿ ಪೋಲ್ ಹಾರಲಿದ್ದಾರೆ.
ಯಾವುದೇ ಅಧಿಕಾರಿಗಳ ಮೇಲ್ವಿಚಾರಣೆ ಇರದ ಸ್ಪರ್ಧೆಯಲ್ಲಿ ಈ ಮೂವರು 30 ನಿಮಿಷಗಳ ಅವಧಿಯಲ್ಲಿ 5 ಮೀಟರ್ ಎತ್ತರವನ್ನು ಸಾಧ್ಯವಾದಷ್ಟು ಸಲ ಹಾರಲಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ವೆಬ್ಸೈಟ್ನಲ್ಲಿ ಈ ಸ್ಪರ್ಧೆ ನೇರಪ್ರಸಾರವನ್ನೂ ಕಾಣಲಿದೆ.