ಚೆಸ್ ಆಟದ ಬಗೆಗಿನ ಹಂಪಿ ಸಮರ್ಪಣೆ ಶ್ಲಾನೀಯವಾದುದು. ಅರ್ಜುನ್ ಅವರ ಸಾಧನೆಯೂ ಹೆಮ್ಮೆ ತಂದಿದೆ. ಅವರ ದಿಟ್ಟತನ ಗಮನಾರ್ಹವಾದುದು ಎಂದು ಮೋದಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಶಂಸಿಸಿದ್ದಾರೆ. ಜತೆಗೆ ಭವಿಷ್ಯದ ಟೂರ್ನಿಗಳಿಗೆ ಶುಭ ಹಾರೈಸಿದ್ದಾರೆ.
38 ವರ್ಷದ ಕೊನೆರು ಹಂಪಿ ವಿಶ್ವ ರ‍್ಯಾಪಿಡ್ ಚಾಂಪಿಯನ್ಷಿಪ್ನಲ್ಲಿ 4ನೇ ಬಾರಿ ಪದಕ ಗೆದ್ದ ಸಾಧನೆ ಮಾಡಿದರು. ಅವರು ಈ ಮುನ್ನ 2019, 2024ರಲ್ಲಿ ಚಾಂಪಿಯನ್ ಆಗಿದ್ದರೆ, 2012ರಲ್ಲಿ ಬೆಳ್ಳಿ ಜಯಿಸಿದ್ದರು. 22 ವರ್ಷದ ಅರ್ಜುನ್ ವಿಶ್ವ ರ‍್ಯಾಪಿಡ್ ಮುಕ್ತ ಚಾಂಪಿಯನ್ಷಿಪ್ನಲ್ಲಿ ಪದಕ ಗೆದ್ದ 2ನೇ ಭಾರತೀಯರಾಗಿದ್ದಾರೆ. ವಿಶ್ವನಾಥನ್ ಆನಂದ್ 2 ಬಾರಿ (2003, 2017) ಚಾಂಪಿಯನ್ ಪಟ್ಟಕ್ಕೇರಿದ್ದರು.