ನನ್ನ ಮಾತಿನಿಂದ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ: ವಿವಾದದ ಬಳಿಕ ಪುರುಷ ಸಮುದಾಯಕ್ಕೆ ಕ್ಷಮೆಯಾಚಿಸಿದ ಮೇರಿ ಕೋಮ್​ | Mary Kom

ಬಾಕ್ಸಿಂಗ್​ ದಂತಕತೆ ಮೇರಿ ಕೋಮ್​, ಮಾಜಿ ಪತಿ ಓನ್ಲರ್ ಕೋಮ್​
ಬಾಕ್ಸಿಂಗ್​ ದಂತಕತೆ ಮೇರಿ ಕೋಮ್​, ಮಾಜಿ ಪತಿ ಓನ್ಲರ್ ಕೋಮ್​
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಪತಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದ ಮೇರಿ ಕೋಮ್​
  • ಜೀವಮಾನದಲ್ಲಿ ಒಂದೇ ಒಂದು ರೂಪಾಯಿ ಗಳಿಸಿಲ್ಲ ಎಂದಿದ್ದ ಮೇರಿ
  • ನನ್ನ ಮಾತು ಯಾರಿಗೂ ನೋವುಂಟು ಮಾಡುವ ಉದ್ದೇಶ ಹೊಂದಿರಲಿಲ್ಲ: ಮೇರಿ ಸ್ಪಷ್ಟಣೆ
ಇನ್‌ಸ್ಟಾಗ್ರಾಮ್​: ಬಾಕ್ಸಿಂಗ್ ದಂತಕಥೆ ಎಂಸಿ ಮೇರಿ ಕೋಮ್ (Mary Kom) ತಮ್ಮ ಮಾಜಿ ಪತಿ ಕೆ. ಓನ್ಲರ್ ಕೋಮ್ ಅವರ ಬಗ್ಗೆ ಇತ್ತೀಚೆಗೆ ನೀಡಿದ್ದ ಹೇಳಿಕೆಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆ ಮೇರಿ ಮೌನ ಮುರಿದಿದ್ದಾರೆ. ಇನ್‌ಸ್ಟಾಗ್ರಾಮ್​ನಲ್ಲಿ ಭಾವನಾತ್ಮಕ ವಿಡಿಯೋವೊಂದದನ್ನು ಹಂಚಿರುವ ಮೇರಿ ಕೋಮ್, ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ತಾವು ನೀಡಿದ ಹೇಳಿಕೆಗಳಿಂದ ಮನನೊಂದವರಿಗೆ ​ಕ್ಷಮೆಯಾಚಿಸಿದ್ದಾರೆ.

ಮೇರಿ ಹೇಳಿದ್ದೇನು?

ಇತ್ತೀಚೆಗೆ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಮೇರಿಗೆ, ಸಂದರ್ಶಕರು ನಿಮ್ಮ ಮಾಜಿ ಪತಿ ಕೋಮ್ ಓನ್ಲರ್ ನಿಮಗಾಗಿ ಹಲವು ರೀತಿಯ ತ್ಯಾಗ ಮಾಡಿದ್ದರಲ್ಲವೇ? ಎಂದು ಕೇಳಿದರು. ಈ ಪ್ರಶ್ನೆಗೆ ಕೆಂಡಾಮಂಡಲಗೊಂಡ ಮೇರಿ, ಕೋಮ್ ಓನ್ಲರ್ ಅವರನ್ನು ಕಟುವಾಗಿ ಟೀಕಿಸುತ್ತಾ, ಅವನು ಜೀವಮಾನದಲ್ಲಿ ಒಂದೇ ಒಂದು ರೂಪಾಯಿಯನ್ನು ಗಳಿಸಲಿಲ್ಲ, ನಾನು ಬಾಕ್ಸಿಂಗ್​ನಲ್ಲಿ ಗಳಿಸಿದ ಹಣದಲ್ಲೇ ಬದುಕಿದ ಮತ್ತು ಅದನ್ನೂ ಸಹ ಹಾಳುಗೇಡುವಿದ ಎಂದು ಆರೋಪಿಸಿದ್ದರು. 
ಗಲ್ಲಿಗಳಲ್ಲಿ ಫುಟ್ಬಾಲ್ ಆಡುತ್ತಿದ್ದ, ಅದರಿಂದ ಇವನೇನು ಸುನಿಲ್ ಛೆಟ್ರಿ ಆಗಲಿಲ್ಲ ಎಂದು ತಮ್ಮ ಮಾಜಿ ಪತಿ ಕೋಮ್ ಓನ್ಲರ್​ನನ್ನು ಅಣುಕಿಸಿದ್ದರು. ಆದರೆ ಮೇರಿ ಅವರ ಈ ಹೇಳಿಕೆ ದೇಶದಾದ್ಯಂತ ಭಾರಿ ಸಂಚಲನವನ್ನು ಹುಟ್ಟುಹಾಕಿ, ಮೇರಿ ಕೋಮ್​​ರ ಹೇಳಿಕೆಗಳನ್ನು ಕಟುವಾಗಿ ಟೀಕಿಸಲಾಯಿತು.
ತಮ್ಮ ವಿರುದ್ಧ ವ್ಯಕ್ತವಾದ ವಿರೋಧಗಳಿಗೆ ಈಗ ಪ್ರತಿಕ್ರಿಯೆ ನೀಡಿರುವ ಮೇರಿ, ತಮ್ಮ ಹೇಳಿಕೆ ಉದ್ದೇಶ ಪುರುಷ ಸಮುದಾಯವನ್ನು ಮತ್ತು ಪುರುಷ ಕ್ರೀಡಾಪಟುಗಳ್ನು ಕೀಳಾಗಿ ಬಿಂಬಿಸುವುದಾಗಿರಲಿಲ್ಲ ಎಂದು ಸ್ಪಷ್ಟಿಕರಣ ನೀಡಿದ್ದಾರೆ. ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಎಂದಿಗೂ ಸಮಾಜದ ಮುಂದೆ ಏನನ್ನು ಹಂಚಿಕೊಂಡವಳಲ್ಲ. ಆದರೆ ವಿಚ್ಛೇದನದ ನಂತರ ನನ್ನನ್ನು ದುರಸೆಯುಳ್ಳ ಮತ್ತು ಐಶಾರಾಮಿ ಜೀವನ ಬಯಸುವ ಮಹಿಳೆ ಎಂಬತ್ತೆ ಬಿಂಬಿಸಲಾಯಿತು ಎಂದು ಹೇಳಿದ್ದಾರೆ.

ಅಭಿಮಾನಿಗಳಿಗೆ ಕ್ಷಮೆಯಾಚನೆ 

ನಾನು ಎಲ್ಲರಿಗೂ, ವಿಶೇಷವಾಗಿ ಪುರುಷ ಸಮುದಾಯಕ್ಕೆ ನನ್ನ ಮಾತಿನಿಂದ ನೋವು ಅಥವಾ ನಿರಾಶೆಗೊಂಡವರಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನನ್ನ ಉದ್ದೇಶ ಯಾವುದೇ ವ್ಯಕ್ತಿಯನ್ನು ಎಂದಿಗೂ ಅವಮಾನಿಸುವುದು ಆಗಿರಲಿಲ್ಲ  ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಮೇರಿ ಮಾಜಿ ಪತಿ ಪ್ರತಿಕ್ರಿಯೆ

ಮೇರಿ ಕೋಮ್ ಕ್ಷಮೆಯಾಚಿಸುವ ಮೊದಲು, ಓನ್ಲರ್ ಕೋಮ್ ಆರ್ಥಿಕ ವಂಚನೆಯ ಆರೋಪಗಳನ್ನು ತಳ್ಳಿಹಾಕಿದ್ದರು. ಮೇರಿ ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾಗ, ನಾನು ಅಡಿಗೆಯವನಾಗಿ, ಆಕೆಯ ಕಾರ್​ ಚಾಲಕನಾಗಿ ಇದ್ದದ್ದಷ್ಟೇ ಅಲ್ಲ ಮಕ್ಕಳಿಗೆ ತಂದೆ-ತಾಯಿ ಎರಡೂ ನಾನೆ ಆಗಿದ್ದೆ. ಮೇರಿಗೆ ಬಾಕ್ಸಿಂಗ್​ನಲ್ಲಿ ಅತೀವ ಆಸಕ್ತಿಯಿದ್ದ ಕಾರಣ ನಾನು ನನ್ನ ಫುಟ್ಬಾಲ್ ಕನಸಿಗೂ ಪೂರ್ಣವಿರಾಮವಿಟ್ಟೆ ಎಂದು ಹೇಳಿದ್ದರು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net