

ಮುಂಬೈ: ಇತ್ತೀಚಿಗೆ ಜೆದ್ದಾ ನಗರದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL2025)ನ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್ ಇಲೆವನ್ ಕಿಂಗ್ಸ್ ಪ್ರಾಂಚೈಸಿ 5 ಮಂದಿ ಆಸ್ಟ್ರೇಲಿಯಾ ಆಟಗಾರರನ್ನು ಖರೀದಿಸಿದೆ. ಈ ಹಿನ್ನೆಯಲ್ಲಿ ಪಂಜಾಬ್ ತಂಡವನ್ನು ''ಮಿನಿ ಆಸ್ಟ್ರೇಲಿಯಾ'' ಮಾಡಲು ಹೊರಟಿದ್ದಾರೆ ಎಂಬ ಟೀಕೆಗೆ ಟೀಮ್ನ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಉತ್ತರ ಕೊಟ್ಟಿದ್ದಾರೆ.
ಖಾಸಗಿ ಸಂದರ್ಶವೊಂದರಲ್ಲಿ ಮಾತನಾಡಿರುವ ಪಾಂಟಿಂಗ್, '' ಐಪಿಎಲ್ ಹರಾಜಿನಲ್ಲಿ ಪಂಜಾಬ್ ಉತ್ತಮ ಆಟಗಾರರನ್ನೇ ಖರೀದಿಸಿದೆ. ನಮ್ಮ ತಂಡಕ್ಕೆ ಕೆಲವು ಅತ್ಯುತ್ತಮ ಆಟಗಾರರನ್ನು ಕರೆ ತಂದಿದ್ದೇವೆ. ಅಲ್ಲದೆ, ಈ ಬಾರಿಯ ತಂಡವನ್ನು ಗಮನಿಸಿದರೆ ಇಂದು ತುಂಬಾ ರೋಮಾಂಚನಕಾರಿಯಾಗಿದೆ. ನಾವು ಬಯಸಿದ ರೀತಿಯಲ್ಲಿ ಹರಾಜು ನಡಯುವುದು ತುಂಬಾ ಕಷ್ಟ. ಆದರೆ, ನಮ್ಮ ಅನಕೂಲ ಮತ್ತು ಪೂರಕ್ಕೆ ತಕ್ಕಂತೆ ಆಟಗಾರರನ್ನು ನಮ್ಮ ಪ್ರಾಂಚೈಸಿ ಕರೆ ತಂದಿದ್ದಾರೆ'' ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, '' ತಂಡದಲ್ಲಿ ಕೆಲ ನಮ್ಮ (ಆಸ್ಟ್ರೇಲಿಯಾ) ಆಟಗಾರ ಇದ್ದಾರೆ. ಇದು ಬಹುಶ ಕೆಲವರಿಗೆ ಇಷ್ಟವಾಗದೇ ಇರಬಹುದು. ಅದರಿಂದ ನಾವು ಟೀಕೆಗಳನ್ನು ಎದರಿಸಬೇಕಾಗುತ್ತದೆ. ಆದರೆ, ನಮ್ಮ ತಂಡಕ್ಕೆ ಅಗತ್ಯವಿರುವ ಆಟಗಾರರು ಇದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಕ್ರಮಾಂಕದಲ್ಲಿ ನಮ್ಮ ತಂಡದವರು ಫಿಟ್ ಮತ್ತು ಪರ್ಫೆಕ್ಟ್ ಇದ್ದಾರೆ'' ಎಂದು ಟೀಕಕಾರರಿಗೆ ಉತ್ತರಿಸಿದ್ದಾರೆ.
ಮಾರ್ಕಸ್ ಸ್ಟೊಯಿನಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಕಿಂಗ್ಸ್‌ಗೆ ಹಿಂತಿರುಗಿಸುವುದು ದೊಡ್ಡದಾಗಿದೆ ಏಕೆಂದರೆ ಅವರಿಬ್ಬರೂ ಹಿಂದೆ ಇಲ್ಲಿ ಆಡಿದ್ದಾರೆ. ಕ್ಸೇವಿಯರ್ ಬಾರ್ಟ್ಲೆಟ್, ಆರನ್ ಹಾರ್ಡಿ ಮತ್ತು ಜೋಶ್ ಇಂಗ್ಲಿಸ್ ಸೇರಿದಂತೆ ಹೊಸ ವ್ಯಕ್ತಿಗಳು ಮೊದಲ ಬಾರಿಗೆ ಐಪಿಎಲ್ ಬರುತ್ತಿದ್ದಾರೆ, ಇದು ನಿಜವಾಗಿಯೂ ನಮಗೆ ರೋಮಾಂಚನಕಾರಿಯಾಗಿದೆ ಎಂದು ಪ್ಯಾಂಟಿಂಗ್ ಹೇಳಿದರು.
ಕಿಂಗ್ಸ್ ಇಲೆವನ್ ತಂಡ ಆಟಗಾರರು
IPL2025: ಶಶಾಂಕ್ ಸಿಂಗ್ ,ಪ್ರಭಾಸಿಮ್ರಾನ್, ಶ್ರೇಯಸ್ ಅಯ್ಯರ್, ಯುಜವೇಂದ್ರ ಚಾಹಲ್, ಹರ್ಷದೀಪ್ ಸಿಂಗ್, ಮಾರ್ಕಸ್ ಸ್ಟೋನಿಸ್ (ಆಸ್ಟ್ರೇಲಿಯಾ), ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ),ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ಹರ್‌ಪ್ರೀತ್ ಬ್ರಾರ್, ವಿಷ್ಣು ವಿನೋದ್, ಮಾರ್ಕೊ ಜಾನ್ಸನ್ (ದಕ್ಷಿಣ ಆಫ್ರಿಕಾ),ಲಾಕಿ ಫರ್ಗುಸನ್ (ನ್ಯೂಜಿಲ್ಯಾಂಡ್), ಜೋಶ್ ಇಂಗ್ಲಿಷ್ (ಆಸ್ಟ್ರೇಲಿಯಾ), ಕ್ಸೇವಿಯರ್ ಬಾರ್ಟ್ಲೆಟ್ (ಆಸ್ಟ್ರೇಲಿಯಾ), ಕುಲದೀಪ್ ಸೇನ್, ಪೈಲಾ ಅವಿನಾಶ್, ಸೂರ್ಯಾಂಶ್ ಶೆಡ್ಜ್, ಮುಶೀರ್ ಖಾನ್, ಹರ್ನೂರ್ ಪನ್ನು, ಆರನ್ ಹಾರ್ಡಿ (ಆಸ್ಟ್ರೇಲಿಯಾ), ಪ್ರಿಯಾಂಶ್ ಆರ್ಯ, ಅಜ್ಮತುಲ್ಲಾ (ಅಫ್ಘಾನಿಸ್ತಾನ).(ಏಜೆನ್ಸೀಸ್).