PHOTOS: 1983ರ ವಿಶ್ವಕಪ್ ಗೆಲುವಿನ ಅವಿಸ್ಮರಣೀಯ ಕ್ಷಣಗಳು...

1983 wc (13)
Published on

ಬೆಂಗಳೂರು: ಇಂದು ಭಾರತೀಯ ಕ್ರಿಕೆಟ್ ಇತಿಹಾಸ ಬದಲಾದ ದಿನ. 1983ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ 3ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಗೆ ಸಾಧಾರಣ ತಂಡವಾಗಿ ಎಂಟ್ರಿಕೊಟ್ಟು, ಬರುತ್ತಾ ಟ್ರೋಫಿಯೊಂದಿಗೆ ತವರಿಗೆ ಮರಳಿದ ಭಾರತದ ಸಾಧನೆಗೆ ಇಡೀ ವಿಶ್ವವೇ ಬೆರಗಾಗಿತ್ತು. ಈ ಅವಿಸ್ಮರಣೀಯ ಘಳಿಗೆಗೆ ಗುರುವಾರ ಭರ್ತಿ 37 ವರ್ಷ. ಈಗ ಭಾರತ ವಿಶ್ವದ ಪ್ರಮುಖ ತಂಡವಾಗಿರುವುದು ಮಾತ್ರವಲ್ಲದೆ, ಕ್ರಿಕೆಟ್ ಆಡಳಿತದಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹಿಡಿತ ಸಾಧಿಸಿದೆ. 1983ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ೈನಲ್ ಪಂದ್ಯದಲ್ಲಿ ಭಾರತ, ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದುಕೊಂಡಿತ್ತು. ಅಂದಿನ ಭಾರತದ ಸಾಧನೆಯ ಕೆಲವೊಂದು ವಿಶೇಷ ಫೋಟೋಗಳ ಮೂಲಕ ಮೆಲುಕು ಹಾಕುವ ಪ್ರಯತ್ನ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net