

ಮೀರ್ಪರ: ಗ್ಲೆನ್ ಫಿಲಿಪ್ಸ್ (87 ರನ್, 72 ಎಸೆತ, 9 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ನ್ಯೂಜಿಲೆಂಡ್ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಅಲ್ಪ ಮುನ್ನಡೆ ಸಾಧಿಸಿದೆ.
ಪಂದ್ಯದ ಮೂರನೇ ದಿನವಾದ ಶುಕ್ರವಾರ 55 ರನ್‌ಗಳಿಂದ ಆಟ ಆರಂಭಿಸಿದ ನ್ಯೂಜಿಲೆಂಡ್ 37.1 ಓವರ್‌ಗಳಲ್ಲಿ 180 ರನ್‌ಗಳಿಗೆ ಆಲೌಟ್ ಆಯಿತು. 8 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿ ಬಾಂಗ್ಲಾ, ದಿನದಂತ್ಯಕ್ಕೆ 8 ಓವರ್‌ಗಳಲ್ಲಿ 2 ವಿಕೆಟ್‌ಗೆ 38 ರನ್ ಕಲೆಹಾಕಿದ್ದು, ಸದ್ಯ 30 ರನ್‌ಗಳ ಮುನ್ನಡೆ ಸಾಧಿಸಿದೆ. ಮೂರನೇ ದಿನದ ಆಟಕ್ಕೂ ಮಳೆ ಅಡ್ಡಿ ಪಡ್ಡಿಸಿದ್ದು, ಮಂದಬೆಳಕಿನ ಕಾರಣ ದಿನದ ಆಟ ಬೇಗನೇ ಅಂತ್ಯಗೊಳಿಸಲಾಯಿತು.
ಬಾಂಗ್ಲಾದೇಶ: 172 ಹಾಗೂ 2 ವಿಕೆಟ್‌ಗೆ 38 (ಝಾಕೀರ್ 16, ನಜ್ಮೂಲ್ 15, ಮಹಮುದುಲ್ 2, ಟಿಮ್ ಸೌಥಿ 8ಕ್ಕೆ1). ನ್ಯೂಜಿಲೆಂಡ್: 37.1 ಓವರ್‌ಗಳಲ್ಲಿ 180 (ಗ್ಲೆನ್ ಫಿಲಿಪ್ಸ್ 87, ಜೇಮಿಸನ್ 20, ಸೌಥಿ 14, ಮೆಹಿದಿ 53ಕ್ಕೆ3, ತೈಜುಲ್ ಇಸ್ಲಾಂ 64ಕ್ಕೆ3).