

ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ಡಾ.ಕಿರಣ ಪ್ರವೀಣ ಮಾಹಿತಿ: ಕಲಬುರಗಿ ನಗರದ ಮೂರು ಮೈದಾನದಲ್ಲಿ ಪಂದ್ಯ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕ್ರಿಕೆಟ್ ಆಟಗಾರರನ್ನು ಪ್ರೋತ್ಸಾಹಿಸಲು ಮತ್ತು ಕ್ರೀಡೆಗೆ ಉತ್ತೇಜನ ನೀಡಲು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರ ೪೫ನೇ ಜನ್ಮ ದಿನದ ಅಂಗವಾಗಿ ನ.೧ ರಿಂದ ೨೨ರವರೆಗೆ ನಗರದಲ್ಲಿ ಪ್ರಿಯಾಂಕ್ ಖರ್ಗೆ ಕಲ್ಯಾಣ ಕರ್ನಾಟಕ ಕ್ರಿಕೆಟï (ಪಿಕೆಕೆಕೆ) ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ಪ್ರಮುಖರಾದ ಡಾ.ಕಿರಣ ದೇಶಮುಖ ಮತ್ತು ಪ್ರವೀಣ ಪಾಟೀಲ್ ಹರವಾಳ ತಿಳಿಸಿದರು.
ನಗರದ ಎಂಎಸ್‌ಕೆ ಮಿಲï ಮೈದಾನ, ನೂತನ ವಿದ್ಯಾಲಯ ಮೈದಾನ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯ ಮೈದಾನ ಹೀಗೆ ಮೂರು ಕಡೆಗಳಲ್ಲಿ ಪಂದ್ಯಗಳು ನಡೆಯಲಿವೆ. ಅದಕ್ಕಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಇಲ್ಲಿ ಪತ್ರಿಕಾ ಭವನದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಏಳು ಜಿ¯್ಲೆಗಳಲ್ಲಿ ಕ್ರಿಕೆಟ್ ಮತ್ತು ಟೆನಿಸ್ ಆಟಗಳಿಗೆ ಉತ್ತೇಜಿಸಲು ಖರ್ಗೆ ಅವರ ಜನ್ಮ ದಿನದ ನೆಪದಲ್ಲಿ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಏಳು ಜಿಲ್ಲೆಗಳ ಪ್ರತಿಭಾವಂತ ಕ್ರೀಡಾಪಟುಗಳು ತಮ್ಮ ತಂಡಗಳ ಹೆಸರು ನೋಂದಣಿ ಮಾಡಿಕೊಂಡು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬೇಕು ಎಂದು ಡಾ.ದೇಶಮುಖ ತಿಳಿಸಿದರು.
ಮೊದಲ ದಿನ ಉದ್ಘಾಟನಾ ಸಮಾರಂಭವು ಒಂದು ಕಡೆಯಲ್ಲಿ ಆಯೋಜನೆ ಮಾಡಲಾಗುವುದು. ಬಳಿಕ ಮೂರು ಮೈದಾನಗಳಲ್ಲಿ ಆಟಗಳು ಜರುಗಲಿವೆ. ಸಚಿವ ಪ್ರಿಯಾಂಕ್ ಅವರ ಜನ್ಮ ದಿನವಾಗಿರುವ ನ.೨೨ ರಂದು ಫೈನಲ್ ಪಂದ್ಯ ನಡೆಯಲಿವೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನ ೧.೫೦ ಲಕ್ಷ ರೂ. ನಗದು ಮತ್ತು ರನ್ನರ್ ಅಪ್ ತಂಡಕ್ಕೆ ೭೫ ಸಾ.ರೂ ಹಾಗೂ ಟ್ರೋಫಿ ನೀಡಲಾಗುವುದು. ಅಲ್ಲದೆ ಇಡಿ ಪಂದ್ಯದಲಿ ಉತ್ತಮ ಕ್ರೀಡಾಪಟು, ಉತ್ತಮ ರನ್ನರ್, ಬಾಟ್‌ಮೆನ್ ವಿಶೇಷ ಪ್ರಶಸ್ತಿ ನೀಡಲಾಗುವುದು. ಪ್ರತಿದಿನ ಪಂದ್ಯದಲ್ಲಿ ಸಹ ಉತ್ತಮ ಆಟಗಾರರಿಗೆ ಪ್ರೋತ್ಸಾಹಕರ ಬಹುಮಾನಗಳನ್ನು ನೀಡಲಾಗುವುದು ಎಂದು ಡಾ.ದೇಶಮುಖ ವಿವರಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ನೋಂದಣಿ ಆರಂಭ
ಪಿಕೆಕೆಕೆ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳ ಹೆಸರು ನೋಂದಣಿ ಮಾಡುವ ಪ್ರಕ್ರಿಯೆ ಗುರುವಾರದಿಂದ ಶುರುವಾಗಲಿದೆ. ಆಸಕ್ತ ಆಟಗಾರರು ಕಲಬುರಗಿ ಜಿ¯್ಲÁ ಕಾಂಗ್ರೆಸ್ ಕಚೇರಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ದೇಶಮುಖ ಮತ್ತು ಪಾಟೀಲ್ ತಿಳಿಸಿದರು. ನೋಂದಣಿ ಅ.೧೯ ಕೊನೆ ದಿನವಾಗಿದೆ. ಕಲಬುರಗಿ ಜಿ¯್ಲÉಯ ಆಟಗಾರರು ಇಲ್ಲವೇ ತಂಡದವರು ಖುದ್ದಾಗಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಹೆಸರು ನೋಂದಣಿ ಮಾಡಬೇಕು. ಕಲಬುರಗಿ ಹೊರತು ಕಲ್ಯಾಣ ಕರ್ನಾಟಕ ಭಾಗದ ಜಿ¯್ಲÉಗಳ ಆಟಗಾರರು ೯೪೮೦೦೪೫೩೦೪ ಅಥವಾ ೭೦೨೬೩೪೭೫೫೫ ಮೊಬೈಲï ಸಂಖ್ಯೆಗೆ ಸಂಪರ್ಕಿಸಿ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿಮಾನಿ ಬಳಗದ ಪ್ರವೀಣ ಹರವಾಳ, ರಾಜೀವ್ ಜಾನೆ, ಈರಣ್ಣ ಝಳಕಿ, ಶಿವಕುಮಾರ ಹೊನಗುಂಟಿ, ಮಜರ್ ಅಲಂಖಾನ್, ಫಾರೂಕ್ ಅಹ್ಮದ್ ಮಣಿಯಾರ್ ಇತರರಿದ್ದರು