

ಬೆಂಗಳೂರು: ವಿಶ್ವದ ಅತಿ ಶ್ರೀಮಂತ ಬ್ಯಾಡ್ಮಿಂಟನ್ ಲೀಗ್ ಎಂಬ ಖ್ಯಾತಿಗಳಿಸಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನ (ಪಿಬಿಎಲ್) 5ನೇ ಆವೃತ್ತಿಗೆ ಇಂದು ಚೆನ್ನೈನಲ್ಲಿ ಚಾಲನೆ ಸಿಗಲಿದೆ. ಎರಡು ವರ್ಷಗಳ ಬಳಿಕ ಚೆನ್ನೈನಲ್ಲಿ ಲೀಗ್ ನಡೆಯುತ್ತಿದ್ದು, ಭಾರತದ ಸ್ಟಾರ್ ಷಟ್ಲರ್ಗಳಾದ ಪಿವಿ ಸಿಂಧು, ಬಿ. ಸಾಯಿ ಪ್ರಣೀತ್, ಮಾಜಿ ವಿಶ್ವ ನಂ.1 ತೈ ಜು ಯಿಂಗ್ ಲೀಗ್ನ ಪ್ರಮುಖ ಆಕರ್ಷಣೆಯಾಗಲಿದ್ದಾರೆ.
ಸ್ಟಾರ್ಗಳ ಉಪಸ್ಥಿತಿ: ಪಿವಿ ಸಿಂಧು, ತೈಜು ಯಿಂಗ್, ಸಾಯಿ ಪ್ರಣೀತ್ ಅಲ್ಲದೆ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಕ್ರಿಶ್ಚಿನಾ ಪೆಡೆರ್ಸನ್ (ಮಹಿಳೆಯರ ಡಬಲ್ಸ್), ಮಾಜಿ ವಿಶ್ವ ನಂ.9 ತಾನೋಂಗ್ಸಕ್ ಸಿಯನ್ಸೋಮ್ೂನ್ಸುಕ್, ಭಾರತ ಅನುಭವಿ ಷಟ್ಲರ್ಗಳಾದ ಪಿ.ಕಶ್ಯಪ್, ಲಕ್ಷ್ಯ ಸೇನ್ ಕಣಕ್ಕಿಳಿಯಲಿದ್ದಾರೆ.
ಸೈನಾ, ಕೆ.ಶ್ರೀಕಾಂತ್ ಗೈರು: ಒಲಿಂಪಿಕ್ಸ್ ಸಿದ್ಧತೆ ಹಿನ್ನೆಲೆಯಲ್ಲಿ ಭಾರತದ ಸೈನಾ ನೆಹ್ವಾಲ್ ಹಾಗೂ ಕೆ.ಶ್ರೀಕಾಂತ್ ಲೀಗ್ನಿಂದ ಹೊರಗುಳಿದರೆ, ಕನ್ನಡತಿ ಅಶ್ವಿನಿ ಪೊನ್ನಪ್ಪ ಯಾವುದೇ ತಂಡಕ್ಕೆ ಸೇಲಾಗಲಿಲ್ಲ.