

ಮೊಹಾಲಿ: ಬ್ಯಾಟರ್ ಭಾನುಕ ರಾಜಪಕ್ಸೆ ಗಳಿಸಿದ ಬಿರುಸಿನ ಅರ್ಧ ಶತಕದ ಫಲವಾಗಿ ಪಂಜಾಬ್ ಕಿಂಗ್ಸ್ ತಂಡವು ಕೊಲ್ಕತ ನೈಟ್ರೈಡರ್ಸ್ ಎದುರು DLS ಮೂಲಕ 7ರನ್ಗಳ ಜಯ ಗಳಿಸಿದೆ.
ಮೊಹಾಲಿಯ PCA ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಸೊತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಭಾನುಕ ರಾಜಪಕ್ಸೆ (50 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್), ನಾಯಕ ಶಿಖರ್ ಧವನ್ (40 ರನ್, 29 ಎಸೆತ, 6 ಬೌಂಡರಿ) ಫಲವಾಗಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ಗಳನ್ನು ಗಳಿಸಿತ್ತು.
ಗುರಿ ಬೆನ್ನತ್ತಿದ ಕೊಲ್ಕತ ನೈಟ್ರೈಡರ್ಸ್ ತಂಡವು ಮಳೆ ಕಾಟದ ನಡುವೆ 16 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 146 ರನ್ಗಳಿಸಿ 7 ರನ್ಗಳ ಸೋಲೊಪ್ಪಿಕೊಂಡಿತ್ತು. ಕೆಕೆಆರ್ ಪರ ಆಂಡ್ರೆ ರಸೆಲ್ (35 ರನ್, 19 ಎಸೆತ, 3 ಬೌಂಡರಿ, 2 ಸಿಕ್ಸರ್), ವೆಂಕಟೇಶ್ ಅಯ್ಯರ್ (34 ರನ್, 28 ಎಸೆತ,3 ಬೌಂಡರಿ, 1 ಸಿಕ್ಸರ್) ರನ್ ಸಿಡಿಸಿದರು.
ಪಂಜಾಬ್ ಪರ ಸ್ಯಾಮ್ ಕರ್ರನ್ (3-0-38-1), ಅರ್ಷ್ದೀಪ್ ಸಿಂಗ್ (3-0-19-3), ನ್ಯಾಥನ್ ಎಲ್ಲಿಸ್ (3-0-27-1), ಸಿಕಂದರತ್ ರಾಜಾ (3-0-25-1), ರಿಷಿ ಧವನ್ (1-0-15-0), ರಾಹುಲ್ ಚಹರ್ (2-0-12-1), ಹರ್ಪ್ರೀತ್ ಬ್ರಾರ್ (1-0-7-0) ವಿಕೆಟ್ ಪಡೆದಿದ್ದಾರೆ.