ರಾಜ್ಯ ಟೆನ್​ಪಿನ್​ ಬೌಲಿಂಗ್​ ಚಾಂಪಿಯನ್​ಷಿಪ್​ ಗೆದ್ದ ಪರ್ವೇಜ್​, ಪ್ರೀಮಲ್​

web tenpin
Published on

ಬೆಂಗಳೂರು: ಪರ್ವೇಜ್​ ಅಹ್ಮದ್​ ಮತ್ತು ಪ್ರೀಮಲ್​ ಜೆ. 9ನೇ ಕೆ. ದಾಮೋದರ್​ ಆಂಡ್​ ಕೋ ಕರ್ನಾಟಕ ರಾಜ್ಯ ಟೆನ್​ಪಿನ್​ ಬೌಲಿಂಗ್​ ಚಾಂಪಿಯನ್​ಷಿಪ್​ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ನಗರದ ಚರ್ಚ್​ಸ್ಟ್ರೀಟ್​ನ ಅಮೀಬಾದಲ್ಲಿ ನಡೆದ ಟೂರ್ನಿಯಲ್ಲಿ ಪುರುಷರ ವಿಭಾಗದ ಫೈನಲ್​ನಲ್ಲಿ 3ನೇ ಶ್ರೆಯಾಂಕಿತ ಪರ್ವೇಜ್​ ಅಹ್ಮದ್​ ಅಗ್ರ ಶ್ರೇಯಾಂಕಿತ ಆಕಾಶ್​ ಅಶೋಕ್​ ಕುಮಾರ್​ಗೆ 73 ಪಿನ್​ಗಳಿಂದ ಆಘಾತಕಾರಿ ಸೋಲುಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡರು. ಪರ್ವೇಜ್​ 192-181, 224-162 ಅಂತರದಿಂದ ಗೆಲುವು ಸಾಧಿಸಿದರು.

ಮಹಿಳಾ ವಿಭಾಗದ ಫೈನಲ್​ನಲ್ಲಿ ಪ್ರೀಮಲ್​ ಜೆ. 95 ಪಿನ್​ಗಳಿಂದ ಅಗ್ರ ಶ್ರೇಯಾಂಕಿತೆ ಹಿತಾಶಾ ಎಸ್​ ವಿರುದ್ಧ ಗೆಲುವು ಸಾಧಿಸಿದರು. ಪ್ರೀಮಲ್​ 198-80, 193-178 ಅಂತರದಿಂದ ಜಯಿಸಿದರು. ಇದಕ್ಕೆ ಮುನ್ನ ಪ್ರೀಮಲ್​ ಜೆ. 3ನೇ ಶ್ರೇಯಾಂಕಿತೆ ಜುಡಿ ಅಲ್ಬನ್​ ಎದುರು 14 ಪಿನ್​ಗಳಿಂದ ರೋಚಕ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿದ್ದರು.

ಗರಿಷ್ಠ ಸರಾಸರಿ ಅಂಕ ಕಲೆಹಾಕಿದ ಆಕಾಶ್​ ಅಶೋಕ್​ ಕುಮಾರ್​ (217.66) ಮತ್ತು ಹಿತಾಶಾ ಸಿಸೋಡಿಯಾ (181.66) ವಿಶೇಷ ಪ್ರಶಸ್ತಿ ಗೆದ್ದುಕೊಂಡರು. ಆಕಾಶ್​ ಅಶೋಕ್​ ಕುಮಾರ್​ 3 ಬಾರಿ 225ಕ್ಕೂ ಅಧಿಕ ಅಂಕ ಗಳಿಸಿದ್ದಕ್ಕೆ ಮತ್ತು ಮಹಿಳಾ ವಿಭಾಗದಲ್ಲಿ ಹಿತಾಶಾ 2 ಬಾರಿ 200ಕ್ಕೂ ಅಧಿಕ ಅಂಕ ಗಳಿಸಿದ್ದಕ್ಕೂ ವಿಶೇಷ ಪ್ರಶಸ್ತಿಗೆ ಭಾಜನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net