

ಪ್ಯಾರಿಸ್: ಭಾರತದ ಕ್ರೀಡಾ ಕ್ಷೇತ್ರದ ಬಂಗಾರದ ಮನುಷ್ಯ ಎನಿಸಿಕೊಂಡಿರುವ ನೀರಜ್ ಚೋಪ್ರಾ ಅವರು ಪ್ಯಾರೀಸ್ ಒಲಿಂಪಿಕ್ಸ್ನ ಪುರುಷರ ಜಾವಲಿನ್ ಎಸೆತದ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಭಾರೀ ಪೈಪೋಟಿಯಿಂದ ಕೂಡಿದ್ದ ಒಲಿಂಪಿಕ್ಸ್ನ ಪುರುಷರ ಜಾವೆಲಿನ್ ಎಸೆತದ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ 89.45 ಮೀ ದೂರ ಎಸೆದರು. 6 ಸುತ್ತುಗಳಲ್ಲಿ 4 ಬಾರಿ ಚೋಪ್ರಾ ಫೌಲ್ ಆಗಿದ್ದೇ ದೊಡ್ಡ ಹಿನ್ನಡೆಯಾಯಿತು.
ಈ ಸ್ಪರ್ಧೆಯಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಥ್ರೋ 92.97 ಮೀಟರ್ ಜಾವೆಲಿನ್ ಎಸೆಯುವುದರೊಂದಿಗೆ ಸ್ವರ್ಣಕ್ಕೆ ಕೊರೊಳೊಡ್ಡಿದ್ದಾರೆ. . ಅಂದ ಹಾಗೆ ಪಾಕಿಸ್ತಾನಕ್ಕೆ 32 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಪದಕವೊಂದು ದೊರಕಿತು. ಅದೂ ಚಿನ್ನ!