

ಪ್ಯಾರಿಸ್: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ್ಕಾಗಿ ನಡೆದ ಪುರುಷರ ಹಾಕಿ ಪಂದ್ಯದಲ್ಲಿ ಭಾರತ ಹಾಕಿ ತಂಡ ಸ್ಪೇನ್ ತಂಡವನ್ನು ಸೋಲಿಸಿ ಸತತ ಎರಡನೇ ಬಾರಿಗೆ ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ. ಕಂಚಿನ ಪದಕ ಗೆದ್ದುಕೊಡುವ ಮೂಲಕ ದೇಶಕ್ಕೆ ಕೀರ್ತಿ ತಂದಿದೆ.
ಸೆಮಿಫೈನಲ್‌ನಲ್ಲಿ ಜರ್ಮನಿ ಎದುರು 2-3 ಅಂತರದಲ್ಲಿ ಸೋತು ಫೈನಲ್ ತಲುಪಲು ವಿಫಲಗೊಂಡಿದ್ದ ಭಾರತ ಹಾಕಿ ತಂಡ, ಗುರುವಾರ (ಆಗಸ್ಟ್ 8) ನಡೆದ ಕಂಚಿನ ಪದಕದ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-1 ಗೋಲ್‌ಗಳಿಂದ ಮಣಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿತು.
ಇದು ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಪುರುಷರ ಹಾಕಿ ತಂಡ ಗೆದ್ದ 4ನೇ ಕಂಚಿನ ಪದಕ ಆಗಿದೆ. ಇದರೊಂದಿಗೆ ಹಾಕಿ ದಿಗ್ಗಜ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಅವರು ಗೆಲುವಿನೊಂದಿಗೆ ವಿದಾಯ ಸಲ್ಲಿಸಿದ್ದಾರೆ.
ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡ ಜರ್ಮನಿಯನ್ನು ಮಣಿಸಿ ಕಂಚಿನ ಪದಕ ಗೆದ್ದಿತ್ತು. ಈ ಟೋಕಿಯೋದಾ ಸಾಧನೆಯನ್ನು ಮತ್ತೆ ಪುನರಾವರ್ತಿಸಿದೆ.