Paris Olympic: ಶಾಟ್​ಪುಟ್​ನಲ್ಲಿ ಕ್ರೌಸರ್​ಗೆ ಸತತ 3ನೇ ಚಿನ್ನ

web shot
Published on

ಪ್ಯಾರಿಸ್: ಅಮೆರಿಕದ ರಿಯಾನ್​ ಕ್ರೌಸರ್​ ಪುರುಷರ ಶಾಟ್​ಪುಟ್​ ಸ್ಪರ್ಧೆಯಲ್ಲಿ ಸತತ 3ನೇ ಒಲಿಂಪಿಕ್ಸ್​ ಸ್ವರ್ಣ ಪದಕ ಗೆದ್ದ ಸಾಧನೆ ಮಾಡಿದರು. ಇದರೊಂದಿಗೆ 30 ಒಲಿಂಪಿಕ್ಸ್​ ಕೂಟಗಳ ಪೈಕಿ 20ರಲ್ಲಿ ಅಮೆರಿಕವೇ ಈ ಸ್ಪರ್ಧೆ ಚಿನ್ನ ಗೆದ್ದುಕೊಂಡಂತಾಗಿದೆ. ಕ್ರೌಸರ್​ 22.90 ಮೀ. ಎಸೆತದೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರೆ, ಅಮೆರಿಕದ ಮತ್ತೋರ್ವ ಸ್ಪರ್ಧಿ ಕೊವಕ್ಸ್​ ಜೋಯಿ (22.15ಮೀ) ಬೆಳ್ಳಿ ಮತ್ತು ಜಮೈಕಾದ ರಜಿಂದ್ರ ಕ್ಯಾಂಪ್​ಬೆಲ್​ (22.15 ಮೀ.) ಕಂಚಿನ ಪದಕ ಗಳಿಸಿದರು. ಕ್ರೌಸರ್​ ಒಲಿಂಪಿಕ್ಸ್​ ಶಾಟ್​ಪುಟ್​ನಲ್ಲಿ 3 ಚಿನ್ನ ಗೆದ್ದ ಮೊದಲಿಗರೂ ಆಗಿದ್ದಾರೆ. ಈ ಮುನ್ನ ಮೂವರು ತಲಾ 2 ಬಾರಿ ಗೆದ್ದಿದ್ದರು.

ಡಚ್ಚರಿಗೆ ಮಿಶ್ರ ರಿಲೇ ಚಿನ್ನ

ಹೀಟ್ಸ್​ನಲ್ಲಿ ವಿಶ್ವದಾಖಲೆ ಬರೆದು ೇವರಿಟ್​ ಎನಿಸಿದ್ದ ಅಮೆರಿಕಕ್ಕೆ ೈನಲ್​ನಲ್ಲಿ ಆಘಾತ ನೀಡಿದ ನೆದರ್ಲೆಂಡ್​ ತಂಡ ಮಿಶ್ರ 4/400 ಮೀ. ರಿಲೇಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ೆಮ್ಕೆ ಬೊಲ್​ ಕೊನೇ ಚರಣದಲ್ಲಿ ವೇಗವಾಗಿ ಓಡಿ ಅಮೆರಿಕದ ಕೈಲಿನ್​ ಬ್ರೌನ್​ರನ್ನು ಕೊನೇಕ್ಷಣದಲ್ಲಿ ಹಿಮ್ಮೆಟ್ಟಿಸುವ ಮೂಲಕ ಡಚ್ಚರ ಸ್ವರ್ಣ ಗೆಲುವಿಗೆ ಕಾರಣರೆನಿಸಿದರು. ನೆದರ್ಲೆಂಡ್​ 3 ನಿಮಿಷ, 7.43 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಅಗ್ರಸ್ಥಾನ ಪಡೆದರೆ, ಅಮೆರಿಕ 3 ನಿಮಿಷ, 7.74 ಸೆಕೆಂಡ್​ಗಳಲ್ಲಿ ಓಡಿ ಬೆಳ್ಳಿ ಜಯಿಸಿತು. ಬ್ರಿಟನ್​ (3ನಿ, 8.01 ಸೆ) ಕಂಚಿನ ಪದಕ ಗಳಿಸಿತು.

ನಾರ್ವೆಯ ಮಾರ್ಕಸ್​ ರುತ್​ಗೆ ಡೆಕಾಥ್ಲಾನ್​ ಸ್ವರ್ಣ

ನಾರ್ವೆಯ ಮಾರ್ಕಸ್​ ರುತ್​ (8,796 ಅಂಕ) ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಪುರುಷರ ಡೆಕಾಥ್ಲಾನ್​ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಜರ್ಮನಿಯ ಲಿಯೋ ನ್ಯೂಗೆಬೌರ್​ (8748) ಬೆಳ್ಳಿ ಮತ್ತು ಗ್ರೆನೇಡದ ಲಿಂಡನ್​ ವಿಕ್ಟರ್​ (8711) ಕಂಚಿನ ಪದಕ ಜಯಿಸಿದರು. ಹಾಲಿ ಚಾಂಪಿಯನ್​ ಕೆನಡದ ಡೇನಿಯನ್​ ವಾರ್ನರ್​ ಈ ಬಾರಿ ಪೋಲ್​ವಾಲ್ಟ್​ನಲ್ಲಿ ವಿಫಲರಾಗುವುದರೊಂದಿಗೆ ಪದಕ ರೇಸ್​ನಿಂದ ಹೊರಬಿದ್ದಿದ್ದರು. 22 ವರ್ಷದ ರುತ್​ ಮೊದಲ ದಿನವೇ ಜಾವೆಲಿನ್​ ಎಸೆತದಲ್ಲಿ ಗೆದ್ದು ಮುನ್ನಡೆ ಸಾಧಿಸಿದ್ದರು. ಡೆಕಾಥ್ಲಾನ್​ನಲ್ಲಿ ಡಿಸ್ಕಸ್​ ಥ್ರೋ, ಪೋಲ್​ವಾಲ್ಟ್​, ಜಾವೆಲಿನ್​ ಥ್ರೋ, ಲಾಂಗ್​ಜಂಪ್​, ಶಾಟ್​ಪುಟ್​, ಹೈಜಂಪ್​, 100 ಮೀ, 400ಮೀ, 1,500 ಮೀ. ಓಟ, 110 ಮೀ. ಹರ್ಡಲ್ಸ್​ ಸೇರಿ ಒಟ್ಟು 10 ಅಥ್ಲೆಟಿಕ್ಸ್​ ಸ್ಪರ್ಧೆ ನಡೆಯುತ್ತದೆ. ಪ್ರತಿ ಸ್ಪರ್ಧೆಯಲ್ಲಿ ಗಳಿಸಿದ ಸ್ಥಾನದ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net