

ಹೈದರಾಬಾದ್: ನಿಜಕ್ಕೂ ಇದು ಬಹಳ ವಿಶೇಷವಾದ ಇನಿಂಗ್ಸ್ ಏಕೆಂದರೆ ನಮ್ಮ ಸೋಲಿನ ಸರಪಳಿಯನ್ನು ಮುರಿಯುವುದು ನಮಗೆ ಬಹಳ ಕಠಿಣವಾಗಿತ್ತು. 4 ಪಂದ್ಯಗಳ ಸೋಲಿನ ನಡುವೆಯೂ ತಂಡದಲ್ಲಿನ ವಾತಾವರಣ ಎಂದಿಗೂ ಬದಲಾಗಲಿಲ್ಲ. ಇದು ದೊಡ್ಡ ಮೊತ್ತವನ್ನು ಬೆನ್ನಟ್ಟಲು ಕಾರಣ ಎಂದು ಪಂಜಾಬ್ ವಿರುದ್ಧದ ದಾಖಲೆಯ ಚೇಸಿಂಗ್ ಬಳಿಕ ಅಭಿಷೇಕ್ ಶರ್ಮ ಸಂತಸ ವ್ಯಕ್ತಪಡಿಸಿದರು.
ಬ್ಯಾಟರ್‌ಗಳು ಹಿಂದಿನ ಪಂದ್ಯಗಳಲ್ಲಿ ರನ್ ಕಲೆಹಾಕಲು ವಿಲವಾದ ನಡುವೆಯೂ, ತಂಡದ ವಾತಾವರಣದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಜತೆಗೆ ಗ್ಯಾಲರಿಯಲ್ಲಿ ಪಾಲಕರ ಹಾಜರಿ, ಅದ್ಭುತ ಪ್ರದರ್ಶನ ನೀಡಲು ಸಹಕಾರಿ ಎನಿಸಿತು. ನನ್ನ ಇಡೀ ತಂಡ ನನ್ನ ಪಾಲಕರಿಗಾಗಿ ಕಾಯುತ್ತಿತ್ತು. ಏಕೆಂದರೆ ಅವರು ಸನ್‌ರೈಸರ್ಸ್ ತಂಡಕ್ಕೆ ಅದೃಷ್ಟಶಾಲಿಯಾಗಿದ್ದಾರೆ ಎಂದು ಪಂದ್ಯಶ್ರೇಷ್ಠ ಅಭಿಷೇಕ್ ಹೇಳಿದರು. ನನ್ನನ್ನು ಸಾಕಷ್ಟು ಹತ್ತಿರದಿಂದ ನೋಡಿದ್ದರೆ, ನಾನು ಎಂದಿಗೂ ವಿಕೆಟ್ ಹಿಂದೆ ಆಡುವುದಿಲ್ಲ. ಆದರೆ ಈ ವಿಕೆಟ್‌ನಲ್ಲಿ ತುಂಬಾ ಸುಲಭವಾಗಿದ್ದ ಕೆಲವು ಹೊಡೆತಗಳನ್ನು ಆವಿಷ್ಕರಿಸಲು ಬಯಸಿದ್ದೆ. ಇದು ನಮಗಿಬ್ಬರಿಗೂ (ಟ್ರಾವಿಸ್ ಹೆಡ್) ಸಹಾಯ ಮಾಡಿತು. ನಾವು ಏನನ್ನೂ ಮಾತನಾಡಲಿಲ್ಲ. ಇದು ಇಬ್ಬರಿಗೂ ಕೇವಲ ಸ್ವಾಭಾವಿಕ ಆಟವಾಗಿತ್ತು ಎಂದರು.
ಪಂಜಾಬ್ ಕಿಂಗ್ಸ್ ನೀಡಿದ 245 ರನ್‌ಗಳ ಬೃಹತ್ ಮೊತ್ತದ ಚೇಸಿಂಗ್‌ಗೆ ಇಳಿದ ಸನ್‌ರೈಸರ್‌ಗೆ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮ (141 ರನ್, 55 ಎಸೆತ, 14 ಬೌಂಡರಿ, 10 ಸಿಕ್ಸರ್) ಹಾಗೂ ಟ್ರಾವಿಸ್ ಹೆಡ್ (66 ರನ್, 37 ಎಸೆತ, 9 ಬೌಂಡರಿ, 3 ಸಿಕ್ಸರ್) ದಾಖಲೆಯ ಜತೆಯಾಟ ನೀಡಿದರು. ಇದರ ಲವಾಗಿ ಸನ್‌ರೈಸರ್ಸ್ ಅಂತಿಮವಾಗಿ 18.3 ಓವರ್‌ಗಳಲ್ಲಿ 2 ವಿಕೆಟ್‌ಗೆ 247 ರನ್‌ಗಳಿಸಿ, ಇನ್ನು 9 ಎಸೆತ ಇರುವಂತೆಯೇ ಗೆದ್ದು ಬೀಗಿತು. ಕೊನೆಯಲ್ಲಿ ಹೆನ್ರಿಕ್ ಕ್ಲಾಸೆನ್ (21*) ಹಾಗೂ ಇಶಾನ್ ಕಿಶನ್ (9*) ಸುಲಭವಾಗಿ ದಡ ಸೇರಿಸಿದರು.
ಶ್ರೇಯಸ್ ಅಯ್ಯರ್, ನಾಯಕ ಪಂಜಾಬ್ ಕಿಂಗ್ಸ್ಇದು ಅದ್ಭುತ ಮೊತ್ತವಾಗಿತ್ತು. ಅವರು ಎರಡು ಓವರ್‌ಗಳು ಬಾಕಿ ಇರುವಾಗ ಅದನ್ನು ಬೆನ್ನಟ್ಟಿದ ರೀತಿ ನನಗೆ ನಗು ತರುತ್ತಿದೆ. ನಾವು ಎರಡು ಕಠಿಣ ಕ್ಯಾಚ್‌ಗಳನ್ನು ಹಿಡಿಯಬಹುದಿತ್ತು. ಆದರೆ ಅವರು (ಅಭಿಷೇಕ್) ಅದೃಷ್ಟಶಾಲಿಯಾಗಿದ್ದರು. ನಾವು ನಿರೀಕ್ಷೆಗೆ ತಕ್ಕ ಬೌಲಿಂಗ್ ಮಾಡಲಿಲ್ಲ. ಅಭಿಷೇಕ್ ಆಟ ನಾನು ನೋಡಿದ ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಒಂದಾಗಿದೆ.
1. ಅಭಿಷೇಕ್ ಶರ್ಮ ಅಂತಾರಾಷ್ಟ್ರೀಯ ಟಿ20 (135) ಹಾಗೂ ಐಪಿಎಲ್‌ನಲ್ಲಿ (141) ವೈಯಕ್ತಿಕ ಗರಿಷ್ಠ ರನ್‌ಗಳಿಸಿದ ಭಾರತೀಯ ಬ್ಯಾಟರ್ ಎನಿಸಿದರು. ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಅಜೇಯ 132 ರನ್‌ಗಳಿಸಿದ್ದು, ಹಿಂದಿನ ಗರಿಷ್ಠ ಮೊತ್ತವಾಗಿತ್ತು.
245. ಪಂಜಾಬ್ ಕಿಂಗ್ಸ್ ತಂಡ ಐಪಿಎಲ್‌ನಲ್ಲಿ ದಾಖಲಿಸಿದ ಎರಡನೇ ಗರಿಷ್ಠ ಮೊತ್ತ ಇದಾಗಿದೆ. ಕೆಕೆಆರ್ ಎದುರು 262 ರನ್‌ಗಳಿಸಿರುವುದು ಅತ್ಯಧಿಕ ಎನಿಸಿದೆ.