'ಆ ಸ್ಟಾರ್ ಫುಟ್ಬಾಲ್ ಆಟಗಾರನಿಂದ ಖಾಸಗಿ ಸಂದೇಶ': ರಹಸ್ಯ ಬಿಚ್ಚಿಟ್ಟ ಒಲಂಪಿಕ್ಸ್​ ಬ್ಯೂಟಿ ಲುವಾನಾ!

al
Published on

ಅಸುನ್ಸಿಯೋನ್: ಪ್ಯಾರಿಸ್ ಒಲಿಂಪಿಕ್ಸ್ ಗೆ ಆ.11(ಭಾನುವಾರ) ತೆರೆಬೀಳಲಿದೆ. ಈ ನಡುವೆ ಹಲವು ವಿವಾದಗಳಿಗೂ ಕ್ರೀಡಾಗ್ರಾಮ ಸಾಕ್ಷಿಯಾಗಿತ್ತು. ಪರಾಗ್ವೆಯ ಈಜುಗಾರ್ತಿ ಲುವಾನಾ ಅಲೋನ್ಸೊ ಅವರನ್ನು ಎರಡು ದಿನಗಳ ಹಿಂದೆ ಕ್ರೀಡಾ ಗ್ರಾಮದಿಂದ ಹೊರಹಾಕಿದ್ದು ತಿಳಿದ ಸಂಗತಿಯೇ. ಅವರ ವರ್ತನೆಯಿಂದ ಸಹ ಆಟಗಾರರಿಗೆ ಮುಜುಗರ ಉಂಟಾದ ಕಾರಣ ಒಲಿಂಪಿಕ್ಸ್ ಆಯೋಜಕರು ಈ ನಿರ್ಧಾರ ಕೈಗೊಂಡಿದ್ದರು. ಆದರೆ ಅಲೋನ್ಸೊ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ವೇಳೆ ಸ್ಟಾರ್ ಫುಟ್ಬಾಲ್ ಆಟಗಾರನೊಬ್ಬ ತನಗೆ ಖಾಸಗಿ ಸಂದೇಶ ಕಳುಹಿಸಿದ್ದ ಎಂದು ಬಹಿರಂಗಪಡಿಸಿದ್ದಾಳೆ.

ಬ್ರೆಜಿಲ್ ಫುಟ್ಬಾಲ್ ತಂಡದ ಮಾಜಿ ನಾಯಕ ನೇಮರ್ ಜೂನಿಯರ್ ನನಗೆ ನೇರ ಸಂದೇಶವನ್ನು ಕಳುಹಿಸಿದ್ದಾರೆ. ನಾನು ಅದನ್ನು ವಿನಂತಿಸಿದ ಮೇರೆಗೆ ಕೈಬಿಟ್ಟಿದ್ದೇನೆ. ಅದರ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ ಎಂದು ಅಲೋನ್ಸೊ ಬಹಿರಂಗಪಡಿಸಿದ್ದಾಳೆ.

ಪ್ಯಾರಿಸ್ ನಿಂದ ಮನೆಗೆ ಮರಳಿದ 20ರ ಹರೆಯದ ಲುವಾನಾ ಈಜಿಗೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾಳೆ. ತನಗೆ ಬೆಂಬಲ ನೀಡಿದ ದೇಶದ ಜನತೆಗೆ ಧನ್ಯವಾದ ಅರ್ಪಿಸಿದ್ದಾಳೆ. ಒಲಿಂಪಿಕ್ಸ್‌ನಲ್ಲಿ ನಡೆದ ವಿವಾದಕ್ಕೆ ಪ್ರತಿಕ್ರಿಯಿಸಿ, ಕ್ರೀಡಾಗ್ರಾಮದಿಂದ ಯಾರೂ ನನ್ನನ್ನು ವಾಪಸ್​ ಕಳುಹಿಸಿಲ್ಲ. ದಯವಿಟ್ಟು ಇಂತಹ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net