ಶತಕದಾಟ! ಮೈದಾನದಲ್ಲೇ ಪಲ್ಟಿ ಹೊಡೆದು ಸಂಭ್ರಮಿಸಿದ ರಿಷಭ್ ಪಂತ್​​; ಕ್ಯಾಪ್ಟನ್​ಗೆ ತಲೆಬಾಗಿದ LSG ಫ್ಯಾನ್ಸ್​

ವಿಜಯವಾಣಿ - 2025-05-27T214041.944
Published on

Rishabh Pant: ಇಂದು (ಮೇ.27) ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್​ಸಿಬಿ ಇದೀಗ ಸವಾಲಿನ ಗುರಿಯನ್ನು ಬೆನ್ನಟ್ಟಿದೆ.

ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಎಲ್​ಎಸ್​ಜಿ, 20 ಓವರ್​ ಮುಕ್ತಾಯಕ್ಕೆ 3 ವಿಕೆಟ್​ ಕಳೆದುಕೊಂಡು 227 ರನ್ ಗಳಿಸಿತು. ಆರಂಭಿಕರಾದ ಮಿಚೆಲ್​ ಮಾರ್ಷ್ (37 ಎಸೆತ, 67 ರನ್​)​ ಮತ್ತು ಕ್ಯಾಪ್ಟನ್​ ರಿಷಭ್ ಪಂತ್ (61 ಎಸೆತ, 118 ರನ್) ಸ್ಫೋಟಕ ಇನ್ನಿಂಗ್ಸ್​ ತಂಡದ ಮೊತ್ತವನ್ನು 200ರ ಗಡಿದಾಟಿಸಿತು.227 ರನ್​ ಕೊಡುಗೆಯಲ್ಲಿ ಭರ್ಜರಿ ಶತಕ ದಾಖಲಿಸಿದ ಪಂತ್​ ಮೈದಾನದಲ್ಲೇ ಪಲ್ಟಿ ಹೊಡೆದು ಶತಕ ಸಂಭ್ರಮಾಚರಣೆ ಮಾಡಿದರು.

ಪಂತ್​ ಪಲ್ಟಿ!

ಶತಕ ದಾಖಲಿಸುತ್ತಿದ್ದಂತೆ ಹೆಲ್ಮೆಟ್​, ಗ್ಲೌಸ್​ ಕಳಚಿಟ್ಟ ರಿಷಭ್ ಪಂತ್​, ಒಂದು ರೌಂಡ್​ ಪಲ್ಟಿ ಹೊಡೆದರು. ಆ ನಂತರ ದೇವರಿಗೆ ಕೈಮುಗಿದು ಎದುರಿಗಿದ್ದ ನಿಕೋಲಸ್​ ಪೂರನ್​ರನ್ನು ತಬ್ಬಿದರು. ಈ ದೃಶ್ಯ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ಹರಿದಾಡಿದ್ದು, ಪಂತ್ ಸಂಭ್ರಮಕ್ಕೆ ಮೆಚ್ಚುಗೆಗಳು ವ್ಯಕ್ತವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net