ಸಾನೋ: ಇತ್ತೀಚೆಗಷ್ಟೇ ಜಪಾನ್ ವಿರುದ್ಧದ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಟೀಮ್ ಇಂಡಿಯಾ, ಕೊನೆಯ ಹಂತದಲ್ಲಿ ರೋಚಕ ಜಯ ಸಾಧಿಸಿದ್ದು ಬಹುತೇಕ ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತೇ ಇದೆ. ಆದರೆ, ಈ ಮಧ್ಯೆ ಮೈದಾನದಲ್ಲಿ ನಡೆದ ಒಂದು ಘಟನೆಯ ದೃಶ್ಯವಂತು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರಿ ವೈರಲ್ ಆಗಿದೆ.
ಟೀಮ್ ಇಂಡಿಯಾದ ಬ್ಯಾಟಿಂಗ್ ವೇಳೆ ಅದಾಗಲೇ ಔಟ್ ಆಗಿ ಪೆವಿಲಿಯನ್ ಸೇರಿದ್ದ ತಂಡದ ಆಟಗಾರರ ಪೈಕಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮೈದಾನದ ಡಗೌಟ್‌ನಲ್ಲಿ ಕುಳಿತಿದ್ದರು. ಈ ವೇಳೆ, ಸ್ಟೇಡಿಯಂನಲ್ಲಿದ್ದ ಅಭಿಮಾನಿಯೊಬ್ಬರು ಮೊದಲು ಇಶಾನ್ ಕಿಶನ್ ಹೆಸರನ್ನು ಕೂಗಿದರು. ಆದರೆ, ಇದಕ್ಕೆ ಕಿಶನ್ ಕ್ಯಾರೇ ಎನ್ನಲಿಲ್ಲ. ಅವರ ನಂತರದಲ್ಲಿ, ಅಲ್ಲೇ ಇದ್ದ ಸ್ಯಾಮ್ಸನ್ಗೆ, ನಾನು ಪಾಕಿಸ್ತಾನಿ, ಐ ಲವ್ ಯೂ ಸಂಜು ಎಂದು ಕೂಗಿದ್ದು ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿದೆ.
ಸಂಜು ನೀವು ಅಭಿಷೇಕ್‌ರನ್ನು ಒಮ್ಮೆ ಕರೆಯಬಹುದಾ? ಎಂದು ಪಾಕ್ ಅಭಿಮಾನಿ ಕೇಳಿದಕ್ಕೆ ಇಶಾನ್ ರೀತಿ ಸುಮ್ಮನಾಗದ ಸಂಜು, ಅಭಿಷೇಕ್ ಶರ್ಮಾ ಈಗ ಊಟ ಮಾಡುತ್ತಿದ್ದಾರೆ. ಪಂದ್ಯ ಈಗಷ್ಟೇ ಮುಗಿದಿದೆ. ನಮಗೂ ಸ್ವಲ್ಪ ಸಮಯ ಕೊಡಿ ಎಂದರು. ಇದಾದ ಬಳಿಕ ಒಂದು ಜಾಗದ ಕಡೆ ಕೈತೋರಿದ ಸ್ಯಾಮ್ಸನ್, ಅಲ್ಲಿಯೇ ನಿಮ್ಮನ್ನು ಭೇಟಿಯಾಗುವುದಾಗಿ ಭರವಸೆ ನೀಡಿದರು. ಇದಕ್ಕೆ ಓಕೆ ಎಂದ ಫ್ಯಾನ್, ಕಾಯುವುದಾಗಿಯೂ ಹೇಳಿದರು. ಪಾಕಿಸ್ತಾನಿ ಅಭಿಮಾನಿ ಮತ್ತು ಸಂಜು ರಿಯಾಕ್ಷನ್ ವಿಡಿಯೋ ಸದ್ಯ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರಿಯರ ಗಮನ ಸೆಳೆಯುತ್ತಿದೆ,(ಏಜೆನ್ಸೀಸ್).