

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸದ್ಯ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವುದರಿಂದ ಕಳೆದ 4 ತಿಂಗಳಿನಿಂದ ತನ್ನ ರಾಷ್ಟ್ರೀಯ ತಂಡದ ಆಟಗಾರರಿಗೆ ವೇತನವನ್ನೇ ನೀಡಿಲ್ಲ ಎಂದು ವರದಿಯಾಗಿದೆ. ಪಾಕಿಸ್ತಾನ ತಂಡದ ಕಳಪೆ ಫಾರ್ಮ್ ಮತ್ತು ಆಟಗಾರರ ನಡುವಿನ ಒಡಕಿನ ನಡುವೆ ಇದೊಂದು ಹೊಸ ಸಮಸ್ಯೆಯಾಗಿದೆ. ಜುಲೈನಿಂದ ಅಕ್ಟೋಬರ್ವರೆಗಿನ ವೇತನವನ್ನು ಪಿಸಿಬಿ ಬಳಿಕ ಉಳಿಸಿಕೊಂಡಿದೆ. ಪಿಸಿಬಿಯ ಕೇಂದ್ರಿಯ ಗುತ್ತಿಗೆ ಹೊಂದಿರುವ ಆಟಗಾರರು ವೇತನ ವಿಳಂಬದಿಂದಾಗಿ ಗರಂ ಆಗಿದ್ದಾರೆ ಎನ್ನಲಾಗಿದೆ.
ಪಿಸಿಬಿ 2023ರಲ್ಲಿ ಆಟಗಾರರಿಗೆ 2026ರವರೆಗೆ 3 ವರ್ಷಗಳ ವಾರ್ಷಿಕ ಒಪ್ಪಂದ ನೀಡಿತ್ತು. 2023ರ ಏಕದಿನ ವಿಶ್ವಕಪ್ ವೈಲ್ಯದ ಬಳಿಕ ಪಿಸಿಬಿ ಈ ಗುತ್ತಿಗೆಯನ್ನು ಪರಿಷ್ಕರಿಸಿತ್ತು. ಇತ್ತೀಚೆಗೆ ಪಾಕ್ ತಂಡ ಬಾಂಗ್ಲಾ ವಿರುದ್ಧವೂ ಟೆಸ್ಟ್ ಸರಣಿ ಸೋತ ಬಳಿಕ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಫಿಟ್ನೆಸ್ ಪರೀೆಯಲ್ಲಿ ಉತ್ತೀರ್ಣರಾಗದ ಆಟಗಾರರಿಗೆ ಕೇಂದ್ರಿಯ ಗುತ್ತಿಗೆ ನೀಡುವುದಿಲ್ಲ ಎಂದೂ ಹೇಳಿದ್ದಾರೆ.
ಈ ನಡುವೆ ಬಾಬರ್ ಅಜಮ್ ಸೀಮಿತ ಓವರ್ ತಂಡದ ನಾಯಕತ್ವ ತ್ಯಜಿಸಿದ್ದು, ಇನ್ನೂ 6 ತಿಂಗಳಿಗೂ ಕಡಿಮೆ ಅವಧಿಯಲ್ಲಿ ತವರಿನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಪಾಕ್ ತಂಡಕ್ಕೆ ಮತ್ತಷ್ಟು ಇಕ್ಕಟ್ಟು ಎದುರಾಗಿದೆ.