ಭಾರತಕ್ಕೆ ಮತ್ತೆ 3 ಐಸಿಸಿ ಟೂರ್ನಿಗಳ ಆತಿಥ್ಯ, ಪಾಕ್​ಗೂ 2 ದಶಕಗಳ ಬಳಿಕ ಅವಕಾಶ

world-cup-trophy-icc web
Published on

ದುಬೈ: 2024ರಿಂದ 2031ರ ನಡುವೆ 8 ವರ್ಷಗಳ ಅವಧಿಯಲ್ಲಿ ನಡೆಯಲಿರುವ ವಿವಿಧ ಐಸಿಸಿ ಟೂರ್ನಿಗಳ ಆತಿಥ್ಯವನ್ನು ಮಂಗಳವಾರ ಪ್ರಧಾನ ಮಾಡಲಾಗಿದ್ದು, ಭಾರತಕ್ಕೆ ಒಟ್ಟು 3 ಟೂರ್ನಿಗಳನ್ನು ಆಯೋಜಿಸುವ ಅವಕಾಶ ಒಲಿದಿದೆ. 2026ರ ಟಿ20 ವಿಶ್ವಕಪ್‌ಗೆ ಶ್ರೀಲಂಕಾ ಜತೆ ಜಂಟಿ ಆತಿಥ್ಯ ವಹಿಸಲಿರುವ ಭಾರತ, 2029ರ ಚಾಂಪಿಯನ್ಸ್ ಟ್ರೋಫಿಯನ್ನೂ ಆಯೋಜಿಸಲಿದೆ. ಬಳಿಕ 2031ರ ಏಕದಿನ ವಿಶ್ವಕಪ್‌ಗೆ ಬಾಂಗ್ಲಾದೇಶ ಜತೆ ಜಂಟಿ ಆತಿಥೇಯ ದೇಶವಾಗಿರಲಿದೆ. ಇದರೊಂದಿಗೆ 2023ರ ಏಕದಿನ ವಿಶ್ವಕಪ್‌ನಿಂದ ಭಾರತದಲ್ಲಿ ಪ್ರತಿ 3 ವರ್ಷಕ್ಕೊಮ್ಮೆ ಐಸಿಸಿ ಟೂರ್ನಿಯೊಂದು ನಡೆಯಲಿದೆ.

2 ದಶಕಗಳ ಬಳಿಕ ಪಾಕ್‌ಗೆ ಆತಿಥ್ಯ

ಉಗ್ರ ಪೀಡಿತ ಪಾಕಿಸ್ತಾನ ಸುಮಾರು 2 ದಶಕಗಳ ಬಳಿಕ ಐಸಿಸಿ ಟೂರ್ನಿಯೊಂದಕ್ಕೆ ಆತಿಥ್ಯ ವಹಿಸುವ ಅವಕಾಶ ಪಡೆದಿದೆ. 2025ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಿಗದಿಪಡಿಸಲಾಗಿದೆ. 1996ರ ಏಕದಿನ ವಿಶ್ವಕಪ್ ಪಾಕ್‌ನಲ್ಲಿ ನಡೆದ ಕೊನೇ ಐಸಿಸಿ ಟೂರ್ನಿಯಾಗಿದೆ.

ನಿರೀಕ್ಷೆಯಂತೆಯೇ 2024ರ ಟಿ20 ವಿಶ್ವಕಪ್ ಜಂಟಿ ಆತಿಥ್ಯವನ್ನು ಅಮೆರಿಕ-ವೆಸ್ಟ್ ಇಂಡೀಸ್‌ಗೆ ನೀಡಲಾಗಿದೆ. ಇದು ಉತ್ತರ ಅಮೆರಿಕದಲ್ಲಿ ನಡೆಯಲಿರುವ ಮೊದಲ ಐಸಿಸಿ ಟೂರ್ನಿಯಾಗಿರಲಿದೆ.

ಐಸಿಸಿ ಟೂರ್ನಿ ಆತಿಥ್ಯ:

2024 ಟಿ20 ವಿಶ್ವಕಪ್: ಅಮೆರಿಕ-ವೆಸ್ಟ್ ಇಂಡೀಸ್

2025 ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನ

2026 ಟಿ20 ವಿಶ್ವಕಪ್: ಭಾರತ-ಶ್ರೀಲಂಕಾ

2027 ಏಕದಿನ ವಿಶ್ವಕಪ್: ನಮೀಬಿಯ, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ

2028 ಟಿ20 ವಿಶ್ವಕಪ್: ನ್ಯೂಜಿಲೆಂಡ್-ಆಸ್ಟ್ರೇಲಿಯಾ

2029 ಚಾಂಪಿಯನ್ಸ್ ಟ್ರೋಫಿ: ಭಾರತ

2030 ಟಿ20 ವಿಶ್ವಕಪ್: ಇಂಗ್ಲೆಂಡ್, ಐರ್ಲೆಂಡ್, ಸ್ಕಾಟ್ಲೆಂಡ್

2031 ಏಕದಿನ ವಿಶ್ವಕಪ್: ಭಾರತ-ಬಾಂಗ್ಲಾದೇಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net