ಜಿಂಬಾಬ್ವೆ ಎದುರು ಟಿ20 ಸರಣಿ ಗೆದ್ದುಕೊಂಡ ಆತಿಥೇಯ ಪಾಕಿಸ್ತಾನ ತಂಡ

pak and zim for web
Published on

ರಾವಲ್ಪಿಂಡಿ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಪ್ರಭುತ್ವ ಸಾಧಿಸಿದ ಆತಿಥೇಯ ಪಾಕಿಸ್ತಾನ ತಂಡ 2ನೇ ಟಿ20 ಪಂದ್ಯದಲ್ಲಿ ಪ್ರವಾಸಿ ಜಿಂಬಾಬ್ವೆ ಎದುರು 8 ವಿಕೆಟ್‌ಗಳಿಂದ ಜಯ ದಾಖಲಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಯಿಂದ ವಶಪಡಿಸಿಕೊಂಡಿತು. ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಮಂಗಳವಾರ (ನ.10) ನಡೆಯಲಿದೆ. ಇದಕ್ಕೂ ಮೊದಲು ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನೂ ಪಾಕಿಸ್ತಾನ 2-1 ರಿಂದ ಗೆದ್ದುಕೊಂಡಿತ್ತು.

ರಾವಲ್ಪಿಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ, ಹ್ಯಾರಿಸ್ ರೌಫ್ (31ಕ್ಕೆ 3) ಹಾಗೂ ಉಸ್ಮಾನ್ ಖಾದಿರ್ (23ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿ 7 ವಿಕೆಟ್‌ಗೆ 134 ರನ್‌ಗಳಿಸಲಷ್ಟೇ ಶಕ್ತವಾಯಿತು. ಬಳಿಕ ಈ ಸಾಧಾರಣ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ತಂಡ, ನಾಯಕ ಬಾಬರ್ ಅಜಮ್ (51ರನ್, 28 ಎಸೆತ, 8 ಬೌಂಡರಿ, 1 ಸಿಕ್ಸರ್) ಹಾಗೂ ಹೈದರ್ ಅಲಿ (66*ರನ್, 43 ಎಸೆತ, 6 ಬೌಂಡರಿ, 3 ಸಿಕ್ಸರ್) ಜೋಡಿ 2ನೇ ವಿಕೆಟ್‌ಗೆ ಪೇರಿಸಿದ 100 ರನ್ ಜತೆಯಾಟದ ಫಲವಾಗಿ 15. 1 ಓವರ್‌ಗಳಲ್ಲಿ 2 ವಿಕೆಟ್‌ಗೆ 137 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಹೈದರ್ ಅಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಜಿಂಜಾಬ್ವೆ: 7 ವಿಕೆಟ್‌ಗೆ 134 (ವೆಸ್ಲೆ ಮಾಧೆವೆರೆ 24, ರ‌್ಯಾನ್ ಬುರ್ಲ್ 32*, ಹ್ಯಾರಿಸ್ ರೌಫ್ 31ಕ್ಕೆ 3, ಉಸ್ಮಾನ್ ಖಾದಿರ್ 23ಕ್ಕೆ 3), ಪಾಕಿಸ್ತಾನ: 15.1 ಓವರ್‌ಗಳಲ್ಲಿ 2 ವಿಕೆಟ್‌ಗೆ 137 (ಬಾಬರ್ ಅಜಮ್ 51, ಹೈದರ್ ಅಲಿ 66*, ಬ್ಲೆಸ್ಸಿಂಗ್ ಮುಜರಾಬನಿ 33ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net