

ಲಾಹೋರ್: ಏಕದಿನ ಕ್ರಿಕೆಟ್ ಟೂರ್ನಿಯೊಂದರ ಫೈನಲ್ ಪಂದ್ಯದಲ್ಲಿ ಗರಿಷ್ಠ ಮೊತ್ತವನ್ನು ಬೆನ್ನಟ್ಟಿ ಗೆದ್ದ ಭಾರತದ ವಿಶ್ವದಾಖಲೆಯನ್ನು ಪಾಕಿಸ್ತಾನ ತಂಡ ಸರಿಗಟ್ಟಿದೆ.
ಇಂಗ್ಲೆಂಡ್ ತಂಡವನ್ನು ಒಳಗೊಂಡ ತವರಿನ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ನೀಡಿದ 326 ರನ್ ಸವಾಲನ್ನು 48.3 ಓವರ್ಗಳಲ್ಲಿ 7 ವಿಕೆಟ್ ನಷ್ಟದಲ್ಲಿ ಬೆನ್ನಟ್ಟಿ ಗೆದ್ದಿತು. ಈ ಮುನ್ನ ಭಾರತ ತಂಡ 2002ರ ನಾಟ್ವೆಸ್ಟ್ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ನೀಡಿದ 226 ರನ್ ಸವಾಲನ್ನು ಯುವರಾಜ್ ಸಿಂಗ್-ಮೊಹಮದ್ ಕೈಫ್ ಜೋಡಿಯ ಸಾಹಸದಿಂದ ಯಶಸ್ವಿಯಾಗಿ ಬೆನ್ನಟ್ಟಿತ್ತು.
331 ರನ್ ಕಲೆಹಾಕಿದ ಪಾಕ್, ಏಕದಿನ ಟೂರ್ನಿಯ ಫೈನಲ್ನಲ್ಲಿ ಚೇಸಿಂಗ್ ವೇಳೆ ಗರಿಷ್ಠ ರನ್ ಗಳಿಸಿದ ದಾಖಲೆಯನ್ನೂ ಬರೆಯಿತು. ಆರಂಭಿಕ ಫಖರ್ ಜಮಾನ್ (127) ಶತಕ ಸಿಡಿಸಿ ಪಾಕ್ ಗೆಲುವಿಗೆ ನೆರವಾದರು.