ಭಾರತವನ್ನು ಸೋಲಿಸುವ ಯಾವುದೇ ಅವಕಾಶವಿಲ್ಲ; ಹೈವೋಲ್ಟೇಜ್ ಮ್ಯಾಚ್ ಬಗ್ಗೆ Pak ಮಾಜಿ ಆಟಗಾರನ ಹೇಳಿಕೆ ವೈರಲ್​

Ind vs Pak
Published on

ನವದೆಹಲಿ: ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವಿನ ಹೈವೋಲ್ಟೇಜ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬದ್ಧವೈರಿಗಳ ಕಾದಾಟವನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಹೈವೋಲ್ಟೇಜ್ ಪಂದ್ಯದ ಕುರಿತು ಮಾಜಿ ಹಾಗೂ ಹಾಲಿ ಆಟಗಾರರು ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಇದೀಗ ಭಾರತ ಮೂಲದ ಪಾಕ್ ಆಟಗಾರ ಡ್ಯಾನಿಶ್​ ಕನೇರಿಯಾ ಮಾತನಾಡಿದ್ದು, ಅವರ ಹೇಳಿಕೆ ಸದ್ಯ ವೈರಲ್ ಆಗಿದೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಕನೇರಿಯಾ, ಭಾರತವನ್ನು ಪಾಕಿಸ್ತಾನ (Pakistan) ಸೋಲಿಸಲು ಸಾಧ್ಯವಿಲ್ಲ ಎಂದು ಹೇಳುತ್ತೇನೆ. ಏಕೆಂದರೆ ತವರು ನೆಲದಲ್ಲಿ ನಡೆದ ತ್ರಿಕೋನ ಸರಣಿ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್​ ಸರಣಿ ಹಾಗೂ ಚಾಂಪಿಯನ್ಸ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಾಕ್​ ಪ್ರದರ್ಶನವೇ ಜೀವಂತ ಸಾಕ್ಷಿಯಾಗಿದೆ. ಭಾರತ ತಂಡದ ಪ್ರಸ್ತುತ ಫಾರ್ಮ್​ ನೋಡಿದರೆ ಪಾಕ್ ಸೋಲುವುದು ಖಚಿತ ಎಂದು ಹೇಳಿದ್ಧಾರೆ.

ಬಾರ್ಡರ್​-ಗವಾಸ್ಕರ್ ಟ್ರೋಫಿ ಟೆಸ್ಟ್​ ಸರಣಿಯಲ್ಲಿ ಭಾರತ ಸೋತ ನಂತರ ಅವರು ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಕಮ್​ಬ್ಯಾಕ್ ಮಾಡಿದ ರೀತಿ ನೋಡಿದರೆ ಎಲ್ಲವೂ ಹೇಳುತ್ತದೆ. ಶಮಿ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದು, ಇದು ಭಾರತಕ್ಕೆ ಪ್ಲಸ್​ ಆಗಿದೆ. ಭಾರತವು ಉತ್ತಮ ಸ್ಪಿನ್ನರ್‌ಗಳನ್ನು ಹೊಂದಿದ್ದು, ಎಡಗೈ ಸ್ಪಿನ್ನರ್‌ಗಳ ವಿರುದ್ಧ ಬಾಬರ್ ಅಜಮ್ ತಿಣುಕಾಡುವುದನ್ನು ನಾವು ನೋಡಿದ್ದೇವೆ. ಪಾಕಿಸ್ತಾನದಲ್ಲಿ ಉತ್ತಮ ಲೆಗ್​ಸ್ಪಿನ್ನರ್ ಇಲ್ಲದಿರುವುದು ಭಾರತಕ್ಕೆ ಹೆಚ್ಚು ಲಾಭವಾಗಲಿದೆ. 

ಭಾರತದ ಪರ ರೋಹಿತ್ ಶರ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು, ಶುಭಮನ್ ಗಿಲ್ ಫಾರ್ಮ್​ ಪಾಕಿಸ್ತಾನದ ಪಾಲಿಗೆ ಅಪಾಯಕಾರಿ ಎಂದು ನಾನು ಭಾವಿಸುತ್ತೇನೆ. ಬುಮ್ರಾ ಅನುಪಸ್ಥಿತಿಯಲ್ಲಿ ಭಾರತ ತಂಡ ಬಲಿಷ್ಠ ಬೌಲಿಂಗ್ ವಿಭಾಗವನ್ನು ಹೊಂದಿದ್ದು, ಪಾಕಿಸ್ತಾನ ಗೆಲ್ಲುವುದು ಕಷ್ಟಕರವಾಗಿದೆ ಎಂದು ಭಾರತ ಮೂಲದ ಪಾಕ್ (Pakistan) ಆಟಗಾರ ಡ್ಯಾನಿಶ್​ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net