ಅಂಧರ ಟಿ20 ಏಷ್ಯಾಕಪ್​ ಟೂರ್ನಿ: ಭಾರತಕ್ಕೆ ಶಾಕ್​ ನೀಡಿದ ಪಾಕಿಸ್ತಾನ

ಭಾರತ ಇನ್ನು ಗುರುವಾರ ಆತಿಥೇಯ ಬಾಂಗ್ಲಾದೇಶ ವಿರುದ್ಧ ತನ್ನ ಅಂತಿಮ ಲೀಗ್​ ಪಂದ್ಯ ಆಡಲಿದೆ.
cricket
ಭಾರತ-ಪಾಕಿಸ್ತಾನ ಪಂದ್ಯದ ನೋಟ.ಏಜೆನ್ಸಿ
Published on: 

ಬೆಂಗಳೂರು: ಭಾರತ ತಂಡ ಅಂಧರ ಟಿ20 ಕ್ರಿಕೆಟ್​ ಏಷ್ಯಾಕಪ್​ ಟೂರ್ನಿಯ ತನ್ನ 2ನೇ ಲೀಗ್​ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೊನೇ ಎಸೆತದಲ್ಲಿ 1 ವಿಕೆಟ್​ನಿಂದ ವೀರೋಚಿತ ಸೋಲು ಅನುಭವಿಸಿದೆ.

ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಭಾರತ ತಂಡ 6 ವಿಕೆಟ್​ಗೆ 179 ರನ್​ ಕಲೆಹಾಕಿತು. ನಾಯಕ ಟಿ. ದುರ್ಗಾ ರಾವ್​ ಗರಿಷ್ಠ 61 ರನ್​ ಬಾರಿಸಿದರು. ಪ್ರತಿಯಾಗಿ ಪಾಕಿಸ್ತಾನ ಕೊನೇ ಎಸೆತದಲ್ಲಿ 9 ವಿಕೆಟ್​ಗೆ 180 ರನ್​ ಕಲೆಹಾಕಿ ರೋಚಕ ಗೆಲುವು ಸಾಧಿಸಿತು.

ಪಾಕ್​ ನಾಯಕ ನಿಸರ್​ ಅಲಿ 64 ರನ್​ ಸಿಡಿಸಿ ಗೆಲುವು ಕಸಿದರು. ಭಾರತ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 179 ರನ್​ಗಳಿಂದ ಗೆದ್ದಿತ್ತು. ಭಾರತ ಇನ್ನು ಗುರುವಾರ ಆತಿಥೇಯ ಬಾಂಗ್ಲಾದೇಶ ವಿರುದ್ಧ ತನ್ನ ಅಂತಿಮ ಲೀಗ್​ ಪಂದ್ಯ ಆಡಲಿದೆ.