ಅತ್ಯಾಚಾರ ಆರೋಪದ ಮೇಲೆ ಕ್ರಿಕೆಟಿಗ ಹೈದರ್ ಅಲಿ ಅರೆಸ್ಟ್​! ಅಮಾನತು ಮಾಡಿದ ಪಾಕ್ ಕ್ರಿಕೆಟ್ ಮಂಡಳಿ..Haider Ali

Pakistan Cricketer
Published on

Haider Ali : ಪಾಕಿಸ್ತಾನದ ಯುವ ಬ್ಯಾಟ್ಸ್‌ಮನ್ ಹೈದರ್ ಅಲಿ ಅವರನ್ನು ಅತ್ಯಾಚಾರ ಆರೋಪದ ಮೇಲೆ ಬಂಧಿಸಲಾಗಿದೆ.

24 ವರ್ಷದ ಹೈದರ್ ಅಲಿ  ವಿರುದ್ಧ ಅತ್ಯಾಚಾರ ಆರೋಪದ  ಬೆಳಕಿಗೆ ಬಂದ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ( ಪಿಸಿಬಿ ) ಹೈದರ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಸದ್ಯ ಹೈದರ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆಯಂತೆ.  ಪಾಕಿಸ್ತಾನ ಪರ ಎರಡು ಏಕದಿನ ಮತ್ತು  ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಪಿಸಿಬಿ ಹೇಳಿಕೆಯಲ್ಲಿ, “ಯುನೈಟೆಡ್ ಕಿಂಗ್‌ಡಂನ ಕಾನೂನು ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳನ್ನು ಪಿಸಿಬಿ ಸಂಪೂರ್ಣವಾಗಿ ಗೌರವಿಸುತ್ತದೆ ಮತ್ತು ತನಿಖೆಯನ್ನು ತನ್ನ ಹಾದಿಯಲ್ಲಿ ನಡೆಸಲು ಅನುಮತಿಸುವ ಮಹತ್ವವನ್ನು ಅರ್ಥಮಾಡಿಕೊಂಡಿದೆ. ಆದ್ದರಿಂದ, ನಡೆಯುತ್ತಿರುವ ತನಿಖೆಯ ಫಲಿತಾಂಶ ಬರುವವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹೈದರ್ ಅಲಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲು ಪಿಸಿಬಿ ನಿರ್ಧರಿಸಿದೆ” ಎಂದು ತಿಳಿಸಿದೆ.

 ಪೊಲೀಸ್​​ ಅಧಿಕಾರಿಯೊಬ್ಬರು ಮಾತನಾಡಿ, ‘ಆಗಸ್ಟ್ 4, 2025 ರಂದು ಅತ್ಯಾಚಾರದ ವರದಿಯನ್ನು ಸ್ವೀಕರಿಸಿದ ನಂತರ ನಾವು 24 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದೇವೆ. ಈ ಘಟನೆ ಜುಲೈ 23, 2025 ರ ಬುಧವಾರದಂದು ಮ್ಯಾಂಚೆಸ್ಟರ್‌ನ ಸಂಕೀರ್ಣವೊಂದರಲ್ಲಿ ನಡೆದಿತ್ತು ಎಂದು ಆರೋಪಿಸಲಾಗಿದೆ. ಹೆಚ್ಚಿನ ತನಿಖೆ ಬಾಕಿ ಇರುವ ಕಾರಣ ಆ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ  ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಹೈದರ್ ಅಲಿ ಟಿ20ಯಲ್ಲಿ 505 ರನ್ ಮತ್ತು ಏಕದಿನದಲ್ಲಿ 42 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ ಮೂರು ಅರ್ಧಶತಕಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net