Indian Flag: ಭಾರತದ ಧ್ವಜ ಪ್ರದರ್ಶಿಸಿದ ಪಾಕ್​ ಚೆಸ್ ತಂಡ!

pak team
pak team
Published on

ನವದೆಹಲಿ: ಭಾರತದ ಧ್ವಜ(Indian Flag) ಹಿಡಿದು ಫೋಟೋಗೆ ಪೋಸ್‌ ಕೊಟ್ಟ ಪಾಕಿಸ್ತಾನ ಚೆಸ್ ತಂಡದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತದ ಧ್ವಜ(Indian Flag) ಹಿಡಿದು ಫೋಟೋಗೆ ಪೋಸ್‌ ಕೊಟ್ಟ ಪಾಕಿಸ್ತಾನ ಚೆಸ್ ತಂಡ: ವೀಡಿಯೋ ವೈರಲ್

ಭಾರತದ ಧ್ವಜ ಹಿಡಿದು ಫೋಟೋಗೆ ಪೋಸ್‌ ಕೊಟ್ಟ ಪಾಕಿಸ್ತಾನ ಚೆಸ್ ತಂಡದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2024ರ ಚೆಸ್ ಒಲಿಂಪಿಯಾಡ್ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯ್ತು, ಭಾರತದ ಮಹಿಳಾ ಹಾಗೂ ಪುರುಷ ಎರಡು ತಂಡಗಳು ಒಟ್ಟೊಟ್ಟಿಗೆ ಮೊದಲ ಬಾರಿಗೆ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದವು. ಅಷ್ಟೇ ಅಲ್ಲ, ಚೆಸ್ ಒಲಿಂಪಿಯಾಡ್‌ನಲ್ಲಿ ಭಾಗಿಯಾದ ಪಾಕಿಸ್ತಾನ ಚೆಸ್‌ ತಂಡ ಭಾರತೀಯ ಧ್ವಜ ಹಿಡಿದು ಫೋಟೋಗೆ ಪೋಸ್ ಕೊಟ್ಟಿತು. ಚೆನ್‌ ಟೂರ್ನ್‌ಮೆಂಟ್ ನಂತರ ನಡೆದ ಫೋಟೋ ಸೆಷನ್ ವೇಳೆ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೆಚ್ಚು ಮಂದಿ ವೀಕ್ಷಣೆ: Indian Flag

ಪಾಕಿಸ್ತಾನ ಭಾರತದ ಧ್ವಜ ಹಿಡಿದಿರುವ ಈ ವೀಡಿಯೋವನ್ನು @ಚೆಸ್​ ಬೇಸ್​ ಇಂಡಿಯಾ ಎಂಬ ಟ್ವಿಟ್ಟರ್‌ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಪಾಕಿಸ್ತಾನ ತನ್ನ ಮೂಲವನ್ನು ಗುರುತಿಸಿದಂತಹ ಅಪರೂಪದ ದೃಶ್ಯ ಎಂದು ಈ ವೀಡಿಯೋಗೆ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನು ನೋಡುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net