

ನ್ಯೂಯಾರ್ಕ್: ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಈ ಬಾರಿ ದಾಖಲೆಯ 10 ಅಮ್ಮಂದಿರು ಕಣಕ್ಕಿಳಿದಿದ್ದಾರೆ. ಈ ಪೈಕಿ 18ನೇ ಶ್ರೇಯಾಂಕಿತೆ ವಿಕ್ಟೋರಿಯಾ ಅಜರೆಂಕಾ ಉನ್ನತ ರ್ಯಾಂಕ್ ಹೊಂದಿರುವ ಅಮ್ಮ ಆಗಿದ್ದಾರೆ.
ಡೆನ್ಮಾರ್ಕ್ನ ಕ್ಯಾರೊಲಿನ್ ವೋಜ್ನಿಯಾಕಿ 2 ಮಕ್ಕಳ ತಾಯಿಯಾದ ಬಳಿಕ ಈ ಬಾರಿ ಮರಳಿದ್ದರೆ, ಯೂಕ್ರೇನ್ನ ಎಲಿನಾ ಸ್ವಿಟೋಲಿನಾ ತಾಯ್ತನದ ಬಿಡುವಿನ ಬಳಿಕ ಕಳೆದ ಫ್ರೆಂಚ್ ಓಪನ್ನಲ್ಲಿ ಮರಳಿ ಕಣಕ್ಕಿಳಿದಿದ್ದರು. ಮಾಜಿ ವಿಶ್ವ ನಂ. 1 ಡಬಲ್ಸ್ ಆಟಗಾರ್ತಿ ಜೆಕ್ ಗಣರಾಜ್ಯದ ಬಾಬೋರ್ರಾ ಸ್ಟ್ರೈಕೋವಾ ಟೂರ್ನಿಯಲ್ಲಿ ಮರಳಿ ಕಣಕ್ಕಿಳಿಯುತ್ತಿರುವ ಮತ್ತೋರ್ವ ಪ್ರಮುಖ ಅಮ್ಮನಾಗಿದ್ದಾರೆ.
ಅಮೆರಿಕದ ಟೇಲರ್ ಟೌನ್ಸೆಂಡ್, ಮಾಜಿ ವಿಶ್ವ ನಂ. 2 ವೆರಾ ಜ್ವೊನರೇವಾ, ಜರ್ಮನಿಯ ತತ್ಜನಾ ಮರಿಯಾ, ರೊಮೇನಿಯಾದ ಪ್ಯಾಟ್ರಿಕಾ ಮರಿಯಾ ಟಿಗ್, ರಷ್ಯಾದ ಮಾರ್ಗರಿಟಾ ಬೆಟೋವಾ ಇತರ ಅಮ್ಮಂದಿರು.