

ಕೌಲಾಲಂಪುರ: ಆರಂಭಿಕ ಬ್ಯಾಟುಗಾರ್ತಿ ಗೊಂಗಡಿ ತ್ರಿಷಾ (110* ರನ್, 59 ಎಸೆತ, 13 ಬೌಂಡರಿ, 4 ಸಿಕ್ಸರ್ ಹಾಗೂ 6ಕ್ಕೆ 3 ವಿಕೆಟ್) ಆಲ್ರೌಂಡ್ ನಿರ್ವಹಣೆಯ ನೆರವಿನಿಂದ ಭಾರತ ತಂಡ 19 ವಯೋಮಿತಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಸೆಮಿೈನಲ್‌ಗೇರಿದೆ. ಮಂಗಳವಾರ ನಡೆದ ಸೂಪರ್ ಸಿಕ್ಸ್ ಹಂತದ 2ನೇ ಹಾಗೂ ಕೊನೇ ಪಂದ್ಯದಲ್ಲಿ ಕನ್ನಡತಿ ನಿಕಿ ಪ್ರಸಾದ್ ಬಳಗ ಸ್ಕಾಟ್ಲೆಡ್ ಎದುರು 150 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಸತತ 5ನೇ ಜಯದೊಂದಿಗೆ ಭಾರತ ಸೂಪರ್ ಸಿಕ್ಸ್ ಗ್ರೂಪ್ 1ರಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದು, ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.
ಬೇಯುಮಾಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಆರಂಭಿಕರಾದ 19 ವರ್ಷದ ಜಿ.ತ್ರಿಷಾ ಹಾಗೂ ಜಿ.ಕಮಲಿನಿ (51 ರನ್, 42 ಎಸೆತ, 9 ಬೌಂಡರಿ) ಮೊದಲ ವಿಕೆಟ್‌ಗೆ 147 ರನ್‌ಗಳ ಭರ್ಜರಿ ಜತೆಯಾಟ ಒದಗಿಸಿದರು. ಅಂತಿಮವಾಗಿ ಭಾರತ 1 ವಿಕೆಟ್‌ಗೆ 208 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಸ್ಪಿನ್ನರ್ ಆಯುಷಿ ಶುಕ್ಲಾ (8ಕ್ಕೆ 4) ವೈಷ್ಣವಿ ಶರ್ಮ (5ಕ್ಕೆ 3) ದಾಳಿಗೆ ತತ್ತರಿಸಿದ ಸ್ಕಾಟ್ಲೆಂಡ್ 14 ಓವರ್‌ಗಳಲ್ಲಿ 58 ರನ್‌ಗಳಿಗೆ ಸರ್ವಪತನ ಕಂಡಿತು.
ಭಾರತ: 1 ವಿಕೆಟ್‌ಗೆ 208 (ಜಿ.ಕಮಲಿನಿ 51, ತ್ರಿಷಾ 110*, ಸನಿಕ ಚಲ್ಕೆ 29*, ಮೈಸಿ 25ಕ್ಕೆ 1).
ಸ್ಕಾಟ್ಲೆಂಡ್: 14 ಓವರ್‌ಗಳಲ್ಲಿ 58 (ಪಿಪ್ಪಾ ಕೆಲ್ಲೆ 12, ಎಮ್ಮಾ 12, ಪಿಪ್ಪಾ ಸ್ಪರೌಲ್ 11, ನಯ್ಮಶೇಕ್ 10*, ಆಯುಷಿ ಶುಕ್ಲಾ 8ಕ್ಕೆ 4, ವೈಷ್ಣವಿ ಶರ್ಮ 5ಕ್ಕೆ 3, ತ್ರಿಷಾ 6ಕ್ಕೆ 3). ಪಂದ್ಯಶ್ರೇಷ್ಠ: ಗೊಂಗಡಿ ತ್ರಿಷಾ.
1. ಗೊಂಗಡಿ ತ್ರಿಷಾ 19 ವಯೋಮಿತಿ ಟಿ20 ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟುಗಾರ್ತಿ ಎನಿಸಿದರು.
*208. 19 ವಯೋಮಿತಿ ಟಿ20 ವಿಶ್ವಕಪ್‌ನಲ್ಲಿ ದಾಖಲಾದ ಎರಡನೇ ಗರಿಷ್ಠ ಮೊತ್ತ ಇದಾಗಿದೆ. 2023ರ ಆವೃತ್ತಿಯಲ್ಲಿ ಭಾರತ ತಂಡ, ಯುಎಇ ಎದುರು 219 ರನ್ ಗಳಿಸಿರುವುದು ಗರಿಷ್ಠ ಮೊತ್ತವಾಗಿದೆ.
ಸೆಮಿೈನಲ್ಸ್
ಯಾವಾಗ: ಶುಕ್ರವಾರ
ಭಾರತ- ಇಂಗ್ಲೆಂಡ್
ಆರಂಭ: ಬೆಳಗ್ಗೆ 8
ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ
ಆರಂಭ: ಮಧ್ಯಾಹ್ನ 12
ನೇರಪ್ರಸಾರ: ಡಿಸ್ನಿ+ ಹಾಟ್‌ಸ್ಟಾರ್.