ಧೋನಿ ಜತೆ ಜಗಳವಾಡೋದು ಎಂದರೆ ಇವರೊಬ್ಬರೇ ಅಂತೆ!

ms dhoni
Published on

ನವದೆಹಲಿ: ಕ್ಯಾಪ್ಟನ್​ ಕೂಲ್​ ಎಂಬ ಹೆಗ್ಗಳಿಕೆಯ ಟೀಂ ಇಂಡಿಯಾದ ಮಾಜಿ ನಾಯ, ಐಪಿಎಲ್​ನ ಚೆನ್ನೈ ಸೂಪರ್​ ಕಿಂಗ್ಸ್​ನ ನಾಯಕ ಮಹೇಂದ್ರ ಸಿಂಗ್​ ಧೋನಿ ಜಗಳವಾಡುವ ಮನುಷ್ಯನೇ ಅಲ್ಲ ಎಂಬುದು ಸಾರ್ವತ್ರಿಕ ಅಭಿಪ್ರಾಯ. ಆದರೆ, ಇವರೊಂದಿಗೂ ಜಗಳವಾಡುವವರು ಇದ್ದಾರೆ ಎಂದರೆ ನಂಬುವುದು ಕಷ್ಟವಾದರೂ ಅದು ನಿಜ.

ಈ ವಿಷಯವನ್ನು ಶ್ರೀಮತಿ ಮಹೇಂದ್ರ ಸಿಂಗ್​ ಧೋನಿ ಅಂದರೆ ಸಾಕ್ಷಿ ಅವರೇ ಸ್ವತಃ ಬಹಿರಂಗಪಡಿಸಿದ್ದಾರೆ. ಮಹಿ ಜತೆ ಯಾರಾದರೂ ಜಗಳವಾಡುವವರು ಇದ್ದರೆ ಅದು ನಾನೊಬ್ಬಳೇ ಎಂದು ಹೇಳಿದ್ದಾರೆ. ಬೇರೆಯವರು ಯಾರೂ ಕೂಡ ಅವರೊಂದಿಗೆ ಜಗಳ ಆಡುವುದೇ ಇಲ್ಲವಂತೆ!

ದಂಪತಿ ಎಂದ ಮೇಲೆ ಜಗಳ, ಹುಸಿಮುನಿಸು ಎಲ್ಲವೂ ಸಹಜ ತಾನೆ. ಹಾಗಾಗಿ, ಧೋನಿ ಮತ್ತು ಸಾಕ್ಷಿ ಜಗಳವಾಡಿಕೊಳ್ಳುತ್ತಿರಬಹುದು. ಅದರಲ್ಲಿ ಏನು ವಿಶೇಷ ಎಂಬುದು ಅಭಿಮಾನಿಗಳ ಅಭಿಪ್ರಾಯವಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net