ನಾಳೆಯಿಂದ ಬೆಂಗಳೂರು ಏಕದಿನ ಟಿಕೆಟ್ ಮಾರಾಟ

RCB 3 Jan 20
Published on

ಬೆಂಗಳೂರು: ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ಜನವರಿ 19ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಪಂದ್ಯದ ಟಿಕೆಟ್ ಮಾರಾಟ ಶನಿವಾರ ಆರಂಭವಾಗಲಿದೆ. 4 ಸಾವಿರದಿಂದ 10 ಸಾವಿರ ರೂಪಾಯಿ ಮೌಲ್ಯದ ಟಿಕೆಟ್​ಗಳ ಆನ್​ಲೈನ್ ಮಾರಾಟ ಶನಿವಾರದಿಂದ ನಡೆಯಲಿದ್ದರೆ, ಇದೇ ಮೌಲ್ಯದ ಟಿಕೆಟ್​ಗಳ ಬಾಕ್ಸ್ ಆಫೀಸ್ ಮಾರಾಟ ಜನವರಿ 13ರಂದು ನಡೆಯಲಿದೆ. ಕೆಎಸ್​ಸಿಎ ವೆಬ್​ಸೈಟ್ (https://www.ksca.cricket/) ಅಥವಾ ಪೇಟಿಎಂ ಮೂಲಕ ಟಿಕೆಟ್

ಖರೀದಿ ಮಾಡಬಹುದು. ಪಿ ಕಾಪೋರೇಟ್ (10 ಸಾವಿರ ರೂ.), ಪೆವಿಲಿಯನ್ ಟೆರೆಸ್ (7500 ರೂ), ಇ-ಎಕ್ಸಿಕ್ಯೂಟಿವ್, ಗ್ರಾಂಡ್ ಟೆರೆಸ್ (5 ಸಾವಿರ ರೂ) ಹಾಗೂ ಎನ್ ಸ್ಟಾ್ಯಂಡ್ (4 ಸಾವಿರ ರೂ.) ಟಿಕೆಟ್​ಗಳು ಆನ್​ಲೈನ್​ನಲ್ಲಿ ಲಭ್ಯವಿದೆ. ಈ ಟಿಕೆಟ್​ಗಳು ಸಂಪೂರ್ಣವಾಗಿ ಆನ್​ಲೈನ್​ನಲ್ಲಿ ಮಾರಾಟವಾಗಲಿದ್ದು, ಉಳಿದುಕೊಂಡರೆ ಮಾತ್ರವೇ ಬಾಕ್ಸ್ ಆಫೀಸ್​ನಲ್ಲಿ ಮಾರಲಾಗುತ್ತದೆ. 2 ಸಾವಿರದಿಂದ 3 ಸಾವಿರ ರೂ. ಮುಖಬೆಲೆಯ ಟಿಕೆಟ್​ಗಳನ್ನು ಬಾಕ್ಸ್ ಆಫೀಸ್​ನಲ್ಲಿ ಜ.13 ರಂದು ಹಾಗೂ ಆನ್​ಲೈನ್​ನಲ್ಲಿ ಜ.14 ರಂದು ಮಾರಾಟ ಮಾಡಲಾಗುತ್ತದೆ. ಎ ಸ್ಟಾ್ಯಂಡ್, ಬಿ ಲೋವರ್, ಬಿ ಅಪ್ಪರ್ (2 ಸಾವಿರ ರೂ.) ಹಾಗೂ ಡಿ ಕಾಪೋರೇಟ್ (3 ಸಾವಿರ ರೂ) ಟಿಕೆಟ್​ಗಳು ಮಾರಾಟವಾಗಲಿವೆ. ಈ ಮುಖಬೆಲೆಯ ಹೆಚ್ಚಿನ ಟಿಕೆಟ್​ಗಳು ಬಾಕ್ಸ್ ಆಫೀಸ್​ನಲ್ಲಿ ಹಾಗೂ ಕಡಿಮೆ ಟಿಕೆಟ್​ಗಳು ಆನ್​ಲೈನ್​ನಲ್ಲಿ ಮಾರಲಾಗುತ್ತದೆ.

ಜ. 13ಕ್ಕೆ 500 ರೂ. ಟಿಕೆಟ್ ಮಾರಾಟ: 500 ರೂಪಾಯಿ ಮುಖಬೆಲೆಯ ಗ್ಯಾಲರಿ  ಸ್ಟ್ಯಾಂಡ್​​ನ ಮೂರು ಗ್ಯಾಲರಿಗಳ (ಜಿ ಅಪ್ಪರ್, ಜಿ ಲೋವರ್-1, ಜಿ ಲೋವರ್-2) ಟಿಕೆಟ್​ಗಳ ಮಾರಾಟ ಜನವರಿ 13ರಂದು ಬಾಕ್ಸ್ ಆಫೀಸ್ ಮೂಲಕ ನಡೆಯಲಿದೆ. ಈ ಟಿಕೆಟ್​ಗಳನ್ನು ಆನ್​ಲೈನ್​ನಲ್ಲಿ ಮಾರಾಟ ಮಾಡಲಾಗುವುದಿಲ್ಲ. ಗ್ಯಾಲರಿ ಟಿಕೆಟ್​ಗಳು ಉಳಿದುಕೊಂಡಲ್ಲಿ ಮಾತ್ರವೇ ಆನ್​ಲೈನ್​ನಲ್ಲಿ ಮಾರಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net