ಡಬ್ಲ್ಯುಪಿಎಲ್ ಆಟಗಾರ್ತಿಯರ ರಿಟೇನ್ ಅವಧಿ ಮುಕ್ತಾಯ: 7 ಆಟಗಾರ್ತಿಯರಿಗೆ ಕೊಕ್ ನೀಡಿದ ಆರ್‌ಸಿಬಿ, ಹೀಗಿದೆ ತಂಡಗಳ ಬಲಾಬಲ!

New-Project-9-1
Published on

ಬೆಂಗಳೂರು: ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲುೃಪಿಎಲ್) 2ನೇ ಆವೃತ್ತಿಗೂ ಮುನ್ನ ಎಲ್ಲ ಐದು ್ರಾಂಚೈಸಿಗಳು ಸ್ಟಾರ್ ಆಟಗಾರ್ತಿಯರನ್ನು ಉಳಿಸಿಕೊಂಡಿವೆ. 21 ವಿದೇಶಿಯರ ಸಹಿತ ಒಟ್ಟು 60 ಆಟಗಾರ್ತಿಯರು ರಿಟೇನ್ ಆಗಿದ್ದು, 29 ಆಟಗಾರ್ತಿಯರನ್ನು ತಂಡದಿಂದ ಕೈಬಿಡಲಾಗಿದೆ.

ಆರ್‌ಸಿಬಿ ತಂಡ ನಾಯಕಿ ಸ್ಮತಿ ಮಂದನಾ, ಶ್ರೇಯಾಂಕ ಪಾಟೀಲ್ ಅವರನ್ನು ಉಳಿಸಿಕೊಂಡರೆ, ಮುಂಬೈ ಇಂಡಿಯನ್ಸ್ ನಾಯಕಿ ಹರ್ಮಾನ್‌ಪ್ರೀತ್ ಕೌರ್, ಡೆಲ್ಲಿ ಕ್ಯಾಪಿಟಲ್ಸ್ ಮೆಗ್ ಲ್ಯಾನಿಂಗ್, ಯುಪಿ ವಾರಿಯರ್ಸ್‌ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮರನ್ನು ಉಳಿಸಿಕೊಂಡಿವೆ. ಗುಜರಾತ್ ಜೈಂಟ್ಸ್ ಆಶ್ಲೇ ಗಾರ್ಡನರ್, ಬೆಥ್ ಮೂನಿರನ್ನು ರಿಟೇನ್ ಮಾಡಿಕೊಂಡಿದೆ. ಆಟಗಾರ್ತಿಯರ ರಿಟೇನ್‌ಗೆ ಅ. 15ರ ಅಂತಿಮ ಗಡುವು ನಿಗದಿ ಮಾಡಲಾಗಿತ್ತು. ಗುಜರಾತ್ ಜೈಂಟ್ಸ್ ಗರಿಷ್ಠ 11 ಆಟಗಾರ್ತಿಯರನ್ನು ಕೈಬಿಟ್ಟಿದೆ.

ಆರ್‌ಸಿಬಿ: ರಿಟೇನ್: ಸ್ಮತಿ ಮಂದನಾ, ಶ್ರೇಯಾಂಕ ಪಾಟೀಲ್, ಎಲ್ಲಿಸ್ ಪೆರ‌್ರಿ, ಸೋಫಿ ಡಿವೈನ್, ಆಶಾ ಶೋಬನಾ, ದಿಶಾ ಕಸತ್, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್.

ಬಿಡುಗಡೆ: ಡೇನ್ ವ್ಯಾನ್ ನೈಕರ್ಕ್, ಎರಿನ್ ಬರ್ನ್ಸ್, ಕೋಮಲ್ ಝಂಝಾದ್, ಮೇಗನ್ ಶುಟ್, ಪೂನಂ ಖೇಮ್ನಾರ್, ಪ್ರೀತಿ ಬೋಸ್, ಸಹನಾ ಪವಾರ್.

ಡೆಲ್ಲಿ ಕ್ಯಾಪಿಟಲ್ಸ್: ರಿಟೇನ್- ಮೆಗ್ ಲ್ಯಾನಿಂಗ್, ಜೆಮೀಮಾ ರೋಡ್ರಿಗಸ್, ಆಲಿಸ್ ಕಾಪ್ಸಿ, ಆರುಂಧತಿ ರೆಡ್ಡಿ, ಜೆಸ್ ಜೊನಾಸೆನ್, ಲಾರಾ ಹ್ಯಾರಿಸ್, ಮರಿಜಾನ್ನೆ ಕಪ್, ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶೆಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ ಭಾಟಿಯಾ, ಟಿಟಾಸ್ ಸಧು.

ಬಿಡುಗಡೆ: ಅಪರ್ಣಾ ಮೊಂಡಲ್, ಜಸಿಯಾ ಅಖ್ತರ್, ತಾರಾ ನೋರಿಸ್ಸ್.

ಗುಜರಾತ್ ಜೈಂಟ್ಸ್: ರಿಟೇನ್: ಆಶ್ಲೇ ಗಾರ್ಡನರ್, ಬೆಥ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ

ಬಿಡುಗಡೆ: ಅನ್ನಾಬೆಲ್ ಸದರ್ಲ್ಯಾಂಡ್, ಅಶ್ವನಿ ಕುಮಾರಿ, ಜಾರ್ಜಿಯಾ ವೇರ್ಹ್ಯಾಮ್, ಹರ್ಲಿ ಗಾಲಾ, ಕಿಮ್ ಗಾರ್ಥ್, ಮಾನ್ಸಿ ಜೋಶಿ, ಮೋನಿಕಾ ಪಟೇಲ್, ಪರುಣಿಕಾ ಸಿಸೋಡಿಯಾ, ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಸುಷ್ಮಾ ವರ್ಮ.

ಮುಂಬೈ ಇಂಡಿಯನ್ಸ್:ರಿಟೇನ್: ಹರ್ಮಾನ್‌ಪ್ರೀತ್ ಕೌರ್, ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಕ್ಲೋಯ್ ಟ್ರಯಾನ್, ಹ್ಯಾಲಿ ಮ್ಯಾಥ್ಯೂಸ್, ಹುಮೈರಾ ಖಾಜಿ, ಇಸಾಬೆಲ್ಲೆ ವಾಂಗ್, ಜಿಂತಾಮಣಿ ಕಲಿತಾ, ನಟಾಲಿಯಾ ಸೀವರ್, ಪೂಜಾ ವಸ್ತ್ರಕರ್, ಪ್ರಿಯಾಂಕಾ ಬಾಲಾ, ಸೈಕಾ ಇಶಾಕ್, ಯಾಸ್ತಿಕಾ ಭಾಟಿಯಾ

ಬಿಡುಗಡೆ: ಧಾರಾ ಗುಜ್ಜರ್, ಹೀದರ್ ಗ್ರಹಾಂ, ನೀಲಂ ಬಿಷ್ಟ್, ಸೋನಮ್ ಯಾದವ್

ಯುಪಿ ವಾರಿಯರ್ಸ್‌: ರಿಟೇನ್: ಅಲಿಸ್ಸಾ ಹೀಲಿ, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ ನವಗಿರೆ, ಲಾರೆನ್ ಬೆಲ್, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್ವಾಡ್, ಎಸ್. ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಕ್‌ಗ್ರಾತ್

ಬಿಡುಗಡೆ: ದೇವಿಕಾ ವೈದ್ಯ, ಶಬ್ನಿಮ್ ಇಸ್ಮಾಯಿಲ್, ಶಿವಾಲಿ ಶಿಂಧೆ, ಸಿಮ್ರಾನ್ ಶೇಖ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net