ಕ್ವಾರ್ಟರ್‌ಫೈನಲ್‌ಗೆ ಜೋಕೋ, ಸಬಲೆಂಕಾ: ಹೊರಬಿದ್ದ ಹಾಲಿ ರನ್ನರ್ ಅಪ್ ಸಿಸಿಪಾಸ್

New-Project-12-1
Published on

ಮೆಲ್ಬೋರ್ನ್: ಅಜೇಯ ಓಟ ಮುಂದುವರಿಸಿರುವ ಹಾಲಿ ಚಾಂಪಿಯನ್ಸ್‌ಗಳಾದ ನೊವಾಕ್ ಜೋಕೊವಿಕ್ ಮತ್ತು ಅರಿನಾ ಸಬಲೆಂಕಾ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಇಟಲಿಯ ಜನಿಕ್ ಸಿನ್ನರ್, ಟೇಲರ್ ಫ್ರಿಟ್ಜ್, 5ನೇ ಶ್ರೇಯಾಂಕಿತ ಆಂಡ್ರೆ ರುಬ್ಲೆವ್, ಯುಎಸ್ ಓಪನ್ ಚಾಂಪಿಯನ್ ಕೋಕೊ ಗೌಫ್ ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಕಳೆದ ಬಾರಿಯ ರನ್ನರ್ ಅಪ್ ಸ್ಟಿಾನೋಸ್ ಸಿಸಿಪಾಸ್, ರಷ್ಯಾದ ಕರೆನ್ ಖಚನೋವ್ 4ನೇ ಸುತ್ತಿನ ಸವಾಲು ದಾಟುವಲ್ಲಿ ವಿಫಲರಾಗಿದ್ದಾರೆ.

ಮೆಲ್ಬೋರ್ನ್ ಪಾರ್ಕ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್‌ನ 16ರ ಘಟ್ಟದ ಪಂದ್ಯದಲ್ಲಿ ವಿಶ್ವ ನಂ.1 ಸೆರ್ಬಿಯಾ ತಾರೆ ಜೋಕೊವಿಕ್ 6-0, 6-0, 6-3 ಸೆಟ್‌ಗಳಿಂದ ್ರಾನ್ಸ್‌ನ ಆಡ್ರಿಯನ್ ಮನ್ನಾರಿನೊ ವಿರುದ್ಧ ಸುಲಭ ಗೆಲುವು ದಾಖಲಿಸಿದರು. 10 ಬಾರಿಯ ಚಾಂಪಿಯನ್ ಜೋಕೊವಿಕ್ 1 ಗಂಟೆ 44 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಇದರೊಂದಿಗೆ ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ ಹೆಚ್ಚು ಬಾರಿ ಎಂಟರ ಘಟ್ಟಕ್ಕೆ ಪ್ರವೇಶಿಸಿದ ರೋಜರ್ ೆಡರರ್ (58) ದಾಖಲೆಯನ್ನು ಸರಿಗಟ್ಟಿದರು. ಆಸ್ಟ್ರೇಲಿಯನ್ ಓಪನ್‌ನಲ್ಲಿ 14ನೇ ಬಾರಿಗೆ ಕ್ವಾರ್ಟರ್ ಫೈನಲ್​ಗೇರಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಟೇಲರ್ ಫ್ರಿಟ್ಜ್ 7-6 (3), 5-7, 6-3, 6-3 ರಿಂದ ಗ್ರೀಸ್‌ನ ಸ್ಟೆಫಾನೋಸ್ ಸಿಸಿಪಾಸ್ ವಿರುದ್ಧ ಗೆದ್ದು, ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ ಕ್ವಾರ್ಟರ್‌ಫೈನಲ್ ತಲುಪಿದರು. ಮುಂದಿನ ಸುತ್ತಿನಲ್ಲಿ ಜೋಕೋ ಸವಾಲು ಎದುರಿಸಲಿದ್ದಾರೆ. 4ನೇ ಶ್ರೇಯಾಂಕಿತ ಜನಿಕ್ ಸಿನ್ನರ್ 6-4, 7-5,6-3 ಸೆಟ್‌ಗಳಿಂದ 15ನೇ ಶ್ರೇಯಾಂಕಿತ ಕರೆನ್ ಖಚನೋವ್ ಅವರನ್ನು ಪರಾಭವಗೊಳಿಸಿದರು.

ಸಬಲೆಂಕಾ, ಗೌಫ್ ಜಯಭೇರಿ: ಮಹಿಳಾ ಸಿಂಗಲ್ಸ್‌ನ ಅಗ್ರ 10 ಶ್ರೇಯಾಂಕಿತೆಯರಲ್ಲಿ ಉಳಿದಿರುವ ಮೂವರು ಆಟಗಾರ್ತಿಯರ ಪೈಕಿ 2ನೇ ಶ್ರೇಯಾಂಕಿತೆ ಅರಿನಾ ಸಬಲೆಂಕಾ, 3ನೇ ಶ್ರೇಯಾಂಕಿತೆ ಕೋಕೊ ಗೌಫ್ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಬೆಲಾರಸ್‌ನ ಸಬಲೆಂಕಾ 4ನೇ ಸುತ್ತಿನಲ್ಲಿ 6-3, 6-2 ರಿಂದ ಅಮೆರಿಕದ ಅಮಂಡಾ ಅನಿಸಿಮೊವಾ ಎದುರು ಗೆಲುವು ದಾಖಲಿಸಿದರು. ಅಮೆರಿಕದ ಕೋಕೊ ಗೌಫ್ 6-1, 6-2 ರಿಂದ ಪೋಲೆಂಡ್‌ನ ಮ್ಯಾಗ್ಡೆನ್  ್ಎದುರು ಜಯ ಕಂಡರು. 16 ವರ್ಷದ ಮೀರ‌್ರಾ ಆಂಡ್ರೀವಾ ಕನಸಿನ ಓಟಕ್ಕೆ ಬಾರ್ಬೊರಾ ಕ್ರೆಜ್ಸಿಕೋವಾ ಬ್ರೇಕ್ ಹಾಕಿದರು. ಬಾರ್ಬೊರಾ ಮುಂದಿನ ಸುತ್ತಿನಲ್ಲಿ ಸಬಲೆಂಕಾ ಅವರನ್ನು ಎದುರಿಸಲಿದ್ದಾರೆ. ಮರಟಾ ಕೊಸ್ಟೃಕ್ 6-2, 6-1 ರಿಂದ ಅರ್ಹತಾ ಸುತ್ತಿನ ಆಟಗಾರ್ತಿ ಮರಿಯಾ ಟಿಮೊಪೊವಾ ಅವರನ್ನು ಮಣಿಸಿದರು. 4-6,6-3,6-2 ರಿಂದ ಗೆದ್ದ ಬಾರ್ಬೊರಾ ಮುಂದಿನ ಸುತ್ತಿನಲ್ಲಿ ಸಬಲೆಂಕಾ ಅವರನ್ನು ಎದುರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net