

ನವದೆಹಲಿ: ಇಂದು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ 44 ಓವರ್ ಅಂತ್ಯಕ್ಕೆ 180 ರನ್ ಕಲೆಹಾಕಿದೆ. ಇನ್ನು ಮೊದಲ ಪಂದ್ಯದಲ್ಲಿ ಗೆಲುವನ್ನು ಸಾಧಿಸಿದ ಜಸ್ಪ್ರಿತ್ ಬುಮ್ರಾ ಪಡೆ, ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿತು. ಮೊದಲ ಮ್ಯಾಚ್ನಲ್ಲಿ ಕ್ರಿಕೆಟ್ ಪ್ರಿಯರು ಹಾಗೂ ಮಾಜಿ ಕ್ರಿಕೆಟಿಗರ ಗಮನಸೆಳೆದ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ, 8 ವಿಕೆಟ್ಗಳನ್ನು ಕಬಳಿಸಿ, ಪ್ಲೇಯರ್ ಆಫ್ ದಿ ಮ್ಯಾಚ್ ಪಟ್ಟಕ್ಕೆ ಅರ್ಹರಾದರು. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿರುವ ಬುಮ್ರಾ ಬಗ್ಗೆ ಟೀಮ್ ಇಂಡಿಯಾದ ಮಾಜಿ ಬೌಲರ್ ಪಿಯೂಷ್ ಚಾವ್ಲಾ ನೇರವಾಗಿ ತಮ್ಮ ಅಭಿಪ್ರಾಯವನ್ನು (Legend Word) ವ್ಯಕ್ತಪಡಿಸಿದ್ದಾರೆ.
ಬುಮ್ರಾ ಕೇವಲ 41 ಟೆಸ್ಟ್ ಪಂದ್ಯಗಳಲ್ಲಿ 181 ವಿಕೆಟ್ ಕಬಳಿಸಿದ್ದಾರೆ. 40 ಟೆಸ್ಟ್‌ಗಳಲ್ಲಿ ಕಾಣಿಸಿಕೊಂಡ ಬಳಿಕ ಅವರನ್ನು ದಿಗ್ಗಜ ಎಂದು ಕರೆಯುವುದನ್ನು ನಾನು ಎಲ್ಲಿಯೂ ನೋಡಿಲ್ಲ. ಈ ವಿಷಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರಿತ್ ಮಾತ್ರ ವಿಭಿನ್ನ ಎಂದು ನಾನು ಭಾವಿಸುತ್ತೀನಿ. ಬುಮ್ರಾ ಬೌಲಿಂಗ್ಗೆ ಆಡುವುದು ಅಷ್ಟು ಸುಲಭದ ಮಾತಲ್ಲ. ಯಾವುದೇ ಬ್ಯಾಟರ್‌ಗಳು ಸಾಮಾನ್ಯವಾಗಿ ಬ್ಯಾಕ್ ಫುಟ್‌ನಲ್ಲಿ ಬ್ಯಾಟ್ ಮಾಡುತ್ತಾರೆ. ಏಕೆಂದರೆ, ಅವರ ಎಸೆತಗಳು ಲೆಂತ್ ಕಡಿಮೆ ಎಂದು ಯೋಚಿಸಿ, ಹೀಗೆ ಆಡಲು ಮುಂದಾಗುತ್ತಾರೆ. ಆದರೆ ಅವರು ಬಾಲ್ನ ಪಿಚ್ ಮಾಡುವ ವಿಶೇಷ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದು ನಿಜಕ್ಕೂ ಗಮನಾರ್ಹ ಎಂದಿದ್ದಾರೆ.
2024ರಲ್ಲಿ ಕ್ಯಾಲೆಂಡರ್ನಲ್ಲಿ 50 ಟೆಸ್ಟ್ ವಿಕೆಟ್ಗಳನ್ನು ಪೂರೈಸಿದ ಮೊದಲ ಬೌಲರ್ ಎಂಬ ಪಟ್ಟವನ್ನು ಜಸ್ಪ್ರೀತ್ ಬುಮ್ರಾ ಸ್ವೀಕರಿಸಿದ್ದಾರೆ. ಅವರ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡ್ತಾರೆ. ವಿಷಯಗಳನ್ನು ಸರಳವಾಗಿಸುತ್ತಾರೆ ಮತ್ತು ಬ್ಯಾಟರ್‌ಗಳಿಗೆ ಸುಲಭವಾಗುವಂತ ಎಸೆತಗಳನ್ನು ಎಂದಿಗೂ ಹಾಕುವುದಿಲ್ಲ ಎಂದು ಚಾವ್ಲಾ ಮೆಚ್ಚಿ ಮಾತನಾಡಿದ್ದಾರೆ,(ಏಜೆನ್ಸೀಸ್).