

ನವದೆಹಲಿ: ಭಾರತದ ಸೆನ್ಸೇಷನ್, ಚದುರಂಗ ಮಾಂತ್ರಿಕ ಆರ್. ಪ್ರಗ್ನಾನಂದ ಅವರು ನಾರ್ವೆ ಚೆಸ್ ಟೂರ್ನಮೆಂಟ್‌ನ ಆರ್ಮಗೆಡನ್ ಗೇಮ್ನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿ ತಮ್ಮ ಗೆಲುವಿನ ಓಟವನ್ನು ಇದೀಗ ಯಶಸ್ವಿಯಾಗಿ ಮುಂದುವರೆಸಿದ್ದಾರೆ.
ಮ್ಯಾಗ್ನಸ್ ಕಾರ್ಲ್‌ಸೆನ್ ಮತ್ತು ಫ್ಯಾಬಿಯಾನೊ ಕರುವಾನಾ ಸೇರಿದಂತೆ ಉನ್ನತ ಶ್ರೇಯಾಂಕದ ಆಟಗಾರರನ್ನು ಮೊದಲ ಸ್ಪರ್ಧೆಯಲ್ಲಿಯೇ ಸೋಲಿಸಿದ ಪ್ರಗ್ನಾನಂದಾ ಇದೀಗ ಈ ಗೆಲುವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಆರ್ಮಗೆಡನ್ ಆಟದಲ್ಲಿ ಹೀನಾಯ ಸೋಲು ಕಂಡ ಡಿಂಗ್ ಲಿರೆನ್, ಸಾಂಪ್ರದಾಯಿಕ ಆಟದಲ್ಲಿ ಪ್ರಜ್ಞಾನಂದ ಅವರೊಂದಿಗೆ ಡ್ರಾ ಮಾಡಿಕೊಂಡಿದ್ದೇ ಆದರೂ, ಉನ್ನತ ಮಟ್ಟದ ವಿಜಯವನ್ನು ಪಡೆಯುವಲ್ಲಿ ಎಡವಿದ್ದಾರೆ,(ಏಜೆನ್ಸೀಸ್).