ರಣಜಿ ಫೈನಲ್ ಆಡಲು ಜಡೇಜಾಗೆ ಅವಕಾಶವಿಲ್ಲ; ದೇಶ ಮೊದಲು ಎಂದ ಬಿಸಿಸಿಐ ಅಧ್ಯಕ್ಷ ಗಂಗೂಲಿ

JADEJA
Published on

ನವದೆಹಲಿ: ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾಗೆ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಪರ ಆಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅನುಮತಿ ನಿರಾಕರಿಸಿದ್ದಾರೆ. ಇದೇ ವೇಳೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ‘ದೇಶ ಮೊದಲು’ ಎಂಬ ಸಂದೇಶ ರವಾನಿಸಿದ್ದಾರೆ.

ಸೋಮವಾರದಿಂದ ರಾಜ್​ಕೋಟ್​ನಲ್ಲಿ ಬಂಗಾಳ ಹಾಗೂ ಸೌರಾಷ್ಟ್ರ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಮಾರ್ಚ್ 12ರಿಂದ ನಡೆಯಲಿರುವ ದಕ್ಷಿಣ ಆಫ್ರಿಕಾ ಸರಣಿಯಿಂದ ಜಡೇಜಾಗೆ ಬಿಡುವು ನೀಡಿ, ಫೈನಲ್ ಪಂದ್ಯದಲ್ಲಿ ಆಡಲು ಅನುಮತಿ ನೀಡಬೇಕೆಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಸ್​ಸಿಎ) ಅಧ್ಯಕ್ಷ ಜೈದೇವ್ ಷಾ, ಗಂಗೂಲಿಗೆ ಮನವಿ ಸಲ್ಲಿಸಿದ್ದರು.

ಬಿಸಿಸಿಐ ವಿರುದ್ಧ ಜೈದೇವ್ ಷಾ ಕಿಡಿ: ದೇಶೀಯ ಕ್ರಿಕೆಟ್​ನ ಪ್ರತಿಷ್ಠಿತ ಟೂರ್ನಿ ರಣಜಿ ಟ್ರೋಫಿ ಪ್ರಸಿದ್ಧಿ ಪಡಿಸಬೇಕೆಂಬುದು ಬಿಸಿಸಿಐ ಬಯಕೆ. ಆದರೆ, ಇಂಥ ಟೂರ್ನಿಯ ಫೈನಲ್ ಪಂದ್ಯದ ವೇಳೆ ತವರಿನಲ್ಲಿ ಅಂತಾರಾಷ್ಟ್ರೀಯ ಟೂರ್ನಿ ಗಳನ್ನು ಆಯೋಜಿಸಬಾರದು ಎಂದು ಜೈದೇವ್ ಷಾ ಅಭಿಪ್ರಾಯ ಪಟ್ಟಿದ್ದಾರೆ. ಫೈನಲ್ ಪಂದ್ಯಗಳಲ್ಲಿ ಸ್ಟಾರ್ ಆಟಗಾರರು ಆಡಿದರಷ್ಟೇ ಟೂರ್ನಿ ಪ್ರಸಿದ್ಧಿ ಪಡೆಯಲಿದೆ. ಇಂಥ ವೇಳೆ

ಯಲ್ಲಿ ಅಂತಾರಾಷ್ಟ್ರೀಯ ಟೂರ್ನಿಗಳನ್ನು ಆಯೋಜಿಸು ವುದು ಸರಿಯಲ್ಲ ಎಂದಿದ್ದಾರೆ. ಸೌರಾಷ್ಟ್ರ ತಂಡದಲ್ಲಿ ಜಡೇಜಾ ಆಡುವುದನ್ನು ನೋಡಲು ಬಯಸುವೆ. ಅದೇ ರೀತಿ ಬಂಗಾಳ ತಂಡದ ಪರ ಮೊಹಮದ್ ಶಮಿ ಕೂಡ ಆಡಲಿ ಎಂದು ತಿಳಿಸಿದ್ದಾರೆ. ಸೌರಾಷ್ಟ್ರ ತಂಡ ಸತತ 2ನೇ ಬಾರಿಗೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್​ನಲ್ಲಿ ಗುಜರಾತ್ ತಂಡವನ್ನು 92 ರನ್​ಗಳಿಂದ ಮಣಿಸಿ ಈ ಸಾಧನೆ ಮಾಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net