ಚೆನ್ನೈನಲ್ಲಿ ಎಂಎಸ್ ಧೋನಿ ರಿಟೇನ್!

Dhoni vvani
Published on

ಚೆನ್ನೈ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ 2021ರ ಇಂಡಿಯನ್ ಪ್ರೀಮಿಯರ್ ಲೀಗ್​ಗೂ (ಐಪಿಎಲ್) ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ತಂಡದಲ್ಲಿ ಉಳಿಸಿಕೊಳ್ಳಲಾಗುವುದು ಎಂದು ತಂಡದ ಮಾಲೀಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ತಿಳಿಸಿದ್ದಾರೆ. ಈ ವೇಳೆ ಧೋನಿ ರಾಷ್ಟ್ರೀಯ ತಂಡದಲ್ಲಿ ಇಲ್ಲದಿದ್ದರೂ ಸಿಎಸ್​ಕೆ ಭಾಗವಾಗಲಿದ್ದಾರೆ ಎಂದು ಹೇಳಿದರು.

ಇತ್ತೀಚೆಗಷ್ಟೇ ಬಿಸಿಸಿಐ ಪ್ರಕಟಿಸಿದ ಕೇಂದ್ರ ಗುತ್ತಿಗೆ ಪಟ್ಟಿಯಿಂದಲ್ಲೂ ಧೋನಿ ಹೊರಬಿದ್ದಿದ್ದರು. ಇದು ಧೋನಿ ನಿವೃತ್ತಿ ಊಹಾಪೋಹಕ್ಕೆ ಮತ್ತಷ್ಟು ಇಂಬು ನೀಡಿತ್ತು. ‘ಜನರು ಏನೇ ಹೇಳಿದರೂ ಧೋನಿ ಮುಂದಿನ ಐಪಿಎಲ್​ನಲ್ಲೂ ಆಡಲಿದ್ದಾರೆ. ಸಿಎಸ್​ಕೆ ತಂಡ ಅವರನ್ನು ಉಳಿಸಿಕೊಳ್ಳಲಿದೆ’ ಎಂದು ಇಂಡಿಯಾ ಸಿಮೆಂಟ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು.

ಎಂಎಸ್ ಧೋನಿ 2008 ರಿಂದಲ್ಲೂ ಸಿಎಸ್​ಕೆ ಭಾಗವಾಗಿದ್ದಾರೆ. ಸಿಎಸ್​ಕೆ ಫ್ರಾಂಚೈಸಿ ಅಮಾನತುಗೊಂಡಿದ್ದ ವೇಳೆ 2 ವರ್ಷ ಪುಣೆ ತಂಡ ಸೇರಿಕೊಂಡಿದ್ದರು. 38 ವರ್ಷದ ಎಂಎಸ್ ಧೋನಿ ಕಳೆದ ಜುಲೈನಲ್ಲಿ ಏಕದಿನ ವಿಶ್ವಕಪ್ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ಎದುರು ಸೋಲನುಭವಿಸಿದ ಬಳಿಕ ಕ್ರಿಕೆಟ್ ಜೀವನದಿಂದ ದೂರ ಉಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net