ಮಗ ಶತಕ ಸಿಡಿಸಿದ ಸಂಭ್ರಮ! ಸುನಿಲ್ ಗವಾಸ್ಕರ್ ಕಾಲಿ ಬಿದ್ದ Nitish Kumar Reddy ತಂದೆ ಮುತ್ಯಾಲ ರೆಡ್ಡಿ..

Nitish Kumar Reddy
Published on

ನವದೆಹಲಿ:  ( Boxing Day Test) ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ನಿತೀಶ್ ಕುಮಾರ್ ರೆಡ್ಡಿ ( Nitish Kumar Reddy ) ಅರ್ಧಶತಕ ಬಾರಿಸಿ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ್ದಾರೆ. ಇದೇ ಖುಷಿಯಲ್ಲಿದ್ದ ನಿತೀಶ್​​ ಅವರ ತಂದೆ ಮುತ್ಯಾಲ ರೆಡ್ಡಿ ಸುನೀಲ್ ಗವಾಸ್ಕರ್ ಅವರ ಪಾದ ಮುಟ್ಟಿ ನಮಿಸಿದರು. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ನಿತೀಶ್ ಕುಮಾರ್ ರೆಡ್ಡಿ ಕುಟುಂಬ ಮೆಲ್ಬೋರ್ನ್​​ನಲ್ಲಿ ಸುನಿಲ್ ಗವಾಸ್ಕರ್ ಮತ್ತು ರವಿಶಾಸ್ತ್ರಿ ಅವರನ್ನು ಭೇಟಿ ಮಾಡಿದೆ. ಈ ಸಭೆಯಲ್ಲಿ ನಿತೀಶ್ ತಂದೆ ಗವಾಸ್ಕರ್ ವಂದಿಸಿದರು. ಅಲ್ಲದೆ ರವಿ ಶಾಸ್ತ್ರಿಯವರ ಪಾದ ಮುಟ್ಟಲು ಯತ್ನಿಸಿದಾಗ ಮೆಲ್ಲನೆ ತಪ್ಪಿಸಿದರು. ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ನಿತೀಶ್ ಕುಮಾರ್ ರೆಡ್ಡಿ ಮೆಲ್ಬೋರ್ನ್‌ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ನಿತೀಶ್ ತಂದೆ ಮುತ್ಯಾಲ ರೆಡ್ಡಿ ಭಾವುಕರಾದರು. ಅಲ್ಲದೆ, ಪಂದ್ಯದ ನಂತರ ನಿತೀಶ್ ತಂದೆ ಸುನಿಲ್ ಗವಾಸ್ಕರ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ಸಭೆಯಲ್ಲಿ ಭಾವುಕರಾದ ತಂದೆ ಗವಾಸ್ಕರ್ ಅವರನ್ನು ಅಪ್ಪಿಕೊಳ್ಳುವ ಬದಲು ಅವರ ಪಾದ ಮುಟ್ಟಿ ನಮನ ಸಲ್ಲಿಸಿದರು. ತಮ್ಮ ಮಗನನ್ನು ಹೊಗಳಿದ ಮಾಜಿ ಆಟಗಾರರಿಗೆ ಧನ್ಯವಾದ ಅರ್ಪಿಸಿದರು.

ನಿತೀಶ್ ಅವರ ತಂದೆ ಮುತ್ಯಾಲ ರೆಡ್ಡಿ ವಿಭಿನ್ನ ಶೈಲಿಯು ದೃಶ್ಯಕ್ಕೆ ಭಾವನಾತ್ಮಕ ಸ್ಪರ್ಶವನ್ನು ನೀಡಿತು. ನಿತೀಶ್ ಅವರ ತಂದೆ ಮೊಣಕಾಲುಗಳ ಮೇಲೆ ಕುಳಿತು ಗವಾಸ್ಕರ್ ಅವರ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ.ತಂದೆಯಂತೆ ನಿತೀಶ್ ರೆಡ್ಡಿ ಸಹೋದರಿ ಕೂಡ ಸುನೀಲ್ ಗವಾಸ್ಕರ್ ಅವರ ಪಾದ ಮುಟ್ಟಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಮೆಲ್ಬೋರ್ನ್‌ನಲ್ಲಿ ಗವಾಸ್ಕರ್ ಅವರನ್ನು ನಿತೀಶ್ ಕುಮಾರ್ ರೆಡ್ಡಿ ಕುಟುಂಬ ಭೇಟಿಯಾದ ಸಂದರ್ಭದಲ್ಲಿ ಈ ವಿಡಿಯೋ ಸೆರೆಹಿಡಿಯಲಾಗಿದೆ.

ನಿತೀಶ್ ರೆಡ್ಡಿ 189 ಎಸೆತಗಳಲ್ಲಿ 114 ರನ್ ಗಳಿಸಿದರು : ಮೆಲ್ಬೋರ್ನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ನಿತೀಶ್ ರೆಡ್ಡಿ 189 ಎಸೆತಗಳಲ್ಲಿ 114 ರನ್ ಗಳಿಸಿದರು. ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. 8ನೇ ಕ್ರಮಾಂಕದಲ್ಲಿ ಆಡಿದ ನಿತೀಶ್ ರೆಡ್ಡಿ ಅವರ ಈ ಇನ್ನಿಂಗ್ಸ್ ಟೆಸ್ಟ್ ಇತಿಹಾಸದಲ್ಲೇ ಅತ್ಯುತ್ತಮ ಇನ್ನಿಂಗ್ಸ್ ಎಂದು ಹಲವು ಕ್ರಿಕೆಟ್ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net