ವಿಶ್ವ ಕುಸ್ತಿ ಚಾಂಪಿಯನ್‌ಶಿಪ್​ನಲ್ಲಿ ಬೆಳ್ಳಿ, ಕಂಚಿನ ಪದಕ ಗೆದ್ದ ನಿಕಿತಾ, ನೇಹಾ!

s
Published on

ಸ್ಪೇನ್​: ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ, ಭಾರತದ ಕುಸ್ತಿಪಟುಗಳು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದಿಂದ ವಂಚಿತರಾಗಿದ್ದರು. ಅದರಲ್ಲೂ ಚಿನ್ನ ಅಥವಾ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದ ವಿನೇಶ್ ಫೋಗಟ್ ಅವರ ಅನರ್ಹತೆ ಭಾರತಕ್ಕೆ ಆಘಾತ ನೀಡಿತ್ತು. ಇದೆಲ್ಲದರ ಹೊರತಾಗಿಯೂ ಭಾರತ ಕುಸ್ತಿ ತಂಡ ಎರಡು ಕಂಚಿನ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಂತಿಮವಾಗಿ ನಿರೀಕ್ಷೆ ಹುಸಿಯಾದ ನಿರಾಸೆ ಭಾರತೀಯರಿಗೆ ಎದುರಾಗಿತ್ತು. ಆದರೆ ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ಸ್ಪರ್ಧಿಗಳು ಪ್ರಾಬಲ್ಯ ಮರೆದಿದ್ದಾರೆ.

ಮಹಿಳೆಯರ 62 ಕೆ.ಜಿ. ವಿಭಾಗದಲ್ಲಿ ನಿಕಿತಾ ಬೆಳ್ಳಿ ಪದಕ ಮತ್ತು ಮಹಿಳೆಯರ 57 ಕೆ.ಜಿ. ವಿಭಾಗದಲ್ಲಿ ನೇಹಾ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ರ್ಯಾಕಿಂಗ್​ನಲ್ಲಿ ಭಾರತ ಐದು ಪದಕಗಳೊಂದಿಗೆ ಎರಡನೇ ಸ್ಥಾನಗಳಿಸಿದೆ. ಕಳೆದ ವರ್ಷ U20 ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮಾಜಿ ಚಿನ್ನದ ಪದಕ ವಿಜೇತೆ ನಿಕಿತಾ, ಫೈನಲ್‌ನಲ್ಲಿ ಉಕ್ರೇನಿಯನ್ ಕುಸ್ತಿಪಟು ಇರಿನಾ ಬೊಂಡಾರ್‌ಗೆ 1-4 ರಿಂದ ಸೋತಿದ್ದರು.

ಮಹಿಳೆಯರ 57 ಕೆ.ಜಿ. ವಿಭಾಗದಲ್ಲಿ ನೇಹಾ ಅವರು ಹಂಗೇರಿಯ ಗೆರ್ಡಾ ಟೆರೆಕ್ ವಿರುದ್ಧ 10-8 ಅಂತರದಲ್ಲಿ ಗೆದ್ದು ಕಂಚಿನ ಪದಕವನ್ನು ಪಡೆದರು.

ಮತ್ತೊಂದೆಡೆ ನಿಕಿತಾ ಅವರು ಫೈನಲ್​ನಲ್ಲಿ ಉಕ್ರೇನ್​ನ ಐರಿನಾ ಬೊಂಡಾರ್ ವಿರುದ್ಧ 1-4 ಅಂತರದಲ್ಲಿ ಪರಾಭಗೊಂಡರು. ಕಳೆದ ವರ್ಷದ ನಡೆದ ಅಂಡರ್-20 ಏಪ್ಯನ್ ಚಾಂಪಿಯನ್​ಶಿಪ್​ನಲ್ಲಿ ನಿಕಿತಾ ಚಿನ್ನದ ಪದಕ ಗೆದ್ದಿದ್ದರು.

ಈ ಹಿಂದೆ ಮಹಿಳೆಯರ 76 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಕೋಮಲ್ (ಮಹಿಳೆಯರ 59 ಕೆಜಿ) ಮತ್ತು ಸೃಷ್ಟಿ (ಮಹಿಳೆಯರ 68 ಕೆಜಿ) ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಕಳೆದ ವರ್ಷ ಜೋರ್ಡಾನ್‌ನ ಅಮ್ಮನ್‌ನಲ್ಲಿ ನಡೆದ ಆವೃತ್ತಿಯಲ್ಲಿ ಭಾರತ ನಾಲ್ಕು ಚಿನ್ನ, ಮೂರು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಪಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net