ಇಂದು ಭಾರತ-ಪಾಕ್ ಕಿರಿಯರ ಕಾದಾಟ: ಭಾರತ ತಂಡಕ್ಕೆ ಕನ್ನಡತಿ ನಾಯಕಿ

New Project (3)
Published on

ಕೌಲಾಲಂಪುರ: ಉದ್ಘಾಟನಾ ಆವೃತ್ತಿಯ ಎಸಿಸಿ 19 ವಯೋಮಿತಿ ಮಹಿಳೆಯರ ಏಷ್ಯಾಕಪ್ ಟಿ20 ಟೂರ್ನಿ ಭಾನುವಾರ ಆರಂಭವಾಗಲಿದ್ದು, ಟೂರ್ನಿಯ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಬಿ ಗುಂಪಿನಲ್ಲಿರುವ ಭಾರತ ತಂಡವನ್ನು ಕನ್ನಡತಿ ನಿಕಿ ಪ್ರಸಾದ್ ಮುನ್ನಡೆಸಲಿದ್ದು, ಮಿಥಿಲಾ ವಿನೋದ್ ತಂಡದಲ್ಲಿರುವ ಮತ್ತೋರ್ವ ಕನ್ನಡತಿಯಾಗಿದ್ದಾರೆ. ನೇಪಾಳ ಬಿ ಗುಂಪಿನ ಇನ್ನೊಂದು ತಂಡವಾಗಿದೆ.

ಎ ಗುಂಪಿನಲ್ಲಿ ಬಾಂಗ್ಲಾದೇಶ, ಆತಿಥೇಯ ಮಲೇಷ್ಯಾ, ಶ್ರೀಲಂಕಾ ತಂಡಗಳಿವೆ. ಟೂರ್ನಿಯಲ್ಲಿ ಭಾಗವಹಿಸಿರುವ ಆರು ತಂಡಗಳನ್ನು ತಲಾ ಮೂರರಂತೆ ವಿಭಾಗಿಸಲಾಗಿದ್ದು,ರೌಂಡ್ ರಾಬಿನ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್ 4 ಹಂತಕ್ಕೆ ಆರ್ಹತೆ ಪಡೆಯಲಿವೆ. ಸೂಪರ್ 4 ರೌಂಡ್ ರಾಬಿನ್ ನಂತರ ಅಗ್ರ 2 ಸ್ಥಾನ ಪಡೆಯುವ ತಂಡಗಳು ಡಿ.22ರಂದು ೈನಲ್‌ನಲ್ಲಿ ಎದುರಾಗಲಿವೆ. ಭಾರತ ತಂಡ ಡಿ.17 ರಂದು ನೇಪಾಳ ಎದುರು ಸೆಣಸಲಿದೆ.

ಪಂದ್ಯ ಆರಂಭ: ಬೆಳಗ್ಗೆ 11.30, ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net