ಏಷ್ಯನ್​ ಅಂಡರ್​-20 ಅಥ್ಲೆಟಿಕ್ಸ್​: ಕರ್ನಾಟಕದ ನಿಖಿಲ್ ಚಂದ್ರಶೇಖರ್​​ಗೆ ಚಿನ್ನದ ಪದಕ

ಏಷ್ಯನ್​ ಅಂಡರ್​-20 ಅಥ್ಲೆಟಿಕ್ಸ್​: ಕರ್ನಾಟಕದ ನಿಖಿಲ್ ಚಂದ್ರಶೇಖರ್​​ಗೆ ಚಿನ್ನದ ಪದಕ
ಏಷ್ಯನ್​ ಅಂಡರ್​-20 ಅಥ್ಲೆಟಿಕ್ಸ್​: ಕರ್ನಾಟಕದ ನಿಖಿಲ್ ಚಂದ್ರಶೇಖರ್​​ಗೆ ಚಿನ್ನದ ಪದಕ
Published on
ಬೆಂಗಳೂರು: ಕರ್ನಾಟಕದ ನಿಖಿಲ್​ ಚಂದ್ರಶೇಖರ್​ (Nikhil Chandrashekar) ಹಾಂಕಾಂಗ್​ನಲ್ಲಿ ನಡೆಯುತ್ತಿರುವ ಏಷ್ಯನ್​ 20 ವಯೋಮಿತಿ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ (Asian U20 Championship) ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಅವರು ಪುರುಷರ 3 ಸಾವಿರ ಮೀ. ಸ್ಟೀಪಲ್​ಚೇಸ್​ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.
ಹಾಂಕಾಂಗ್​ನ ಕೈ ತಕ್​ ಯೂತ್​ ಸ್ಪೋರ್ಟ್ಸ್​ ಗ್ರೌಂಡ್​ನಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ನಿಖಿಲ್​ 9 ನಿಮಿಷ, 25.44 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಕೂಟದ ಮೂರನೇ ದಿನ ಭಾರತ ಒಟ್ಟು 3 ಚಿನ್ನದ ಪದಕ ಬಾಚಿಕೊಂಡಿತು. ಈ ಮೂಲಕ ಭಾರತ ಕೂಟದ ಪದಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದುರಿದಿದೆ. ಚೀನಾ 10 ಚಿನ್ನದ ಪದಕದೊಂದಿಗೆ ಅಗ್ರಸ್ಥಾನದಲ್ಲಿದೆ.
ಭಾರತದ ಬಸಂತ್​ ಹೈಜಂಪ್​ ಮತ್ತು ಶಹನವಾಜ್​ ಖಾನ್​ ಲಾಂಗ್​ ಜಂಪ್​ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡರು. ಇದರಿಂದ ಭಾರತ ಕೂಟದಲ್ಲಿ ಇದುವರೆಗೆ ಗೆದ್ದ ಚಿನ್ನದ ಪದಕಗಳ ಸಂಖ್ಯೆ 7ಕ್ಕೇರಿದೆ. ಭಾರತದ ಆರತಿ ಮಹಿಳೆಯರ 200 ಮೀ. ಓಟದಲ್ಲಿ 24.12 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಕಂಚಿನ ಪದಕ ಒಲಿಸಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net