ಜೀವನದ ಎರಡನೇ ಇನಿಂಗ್ಸ್​ ಆರಂಭಿಸಿದ ಪಂಜಾಬ್​ ಕಿಂಗ್ಸ್​ ಬ್ಯಾಟ್ಸ್​ಮನ್​

nicolas pooran for web
Published on

ಬೆಂಗಳೂರು: ಪಂಜಾಬ್​ ಕಿಂಗ್ಸ್​ ಹಾಗೂ ವೆಸ್ಟ್​ ಇಂಡೀಸ್​ ತಂಡದ ಬ್ಯಾಟ್ಸ್​ಮನ್​ ನಿಕೋಲಸ್​ ಪೂರನ್​ ತಮ್ಮ ಬಹುದಿನಗಳ ಗೆಳತಿ ಅಲೈಸಾ ಮಿಗುಲ್​ ಅವರನ್ನು ಮಂಗಳವಾರ ವರಿಸಿದರು. ಅಲೈಸಾ ಅವರನ್ನು ಮದುವೆಯಾಗಿರುವ ಬಗ್ಗೆ ಪೂರನ್​ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಶೇರ್​ ಮಾಡಿದ ಬೆನ್ನಲ್ಲೆ ಪೂರನ್​ ಜೋಡಿಗೆ ಕ್ರಿಕೆಟ್​ ವಲಯದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಐಪಿಎಲ್​ ಫ್ರಾಂಚೈಸಿ ಪಂಜಾಬ್​ ಕಿಂಗ್ಸ್​ ಫೋಟೋ ಸಮೇತ ಶುಭಾಶಯ ತಿಳಿಸಿದೆ.

ಪೂರನ್​ ನಿಮ್ಮ ಸುಂದರ ಜತೆಯಾಟ ಆರಂಭವಾಗಲಿ. ಸದಾಕಾಲ ಖುಷಿಯಾಗಿರಿ ಎಂದು ಪಂಜಾಬ್​ ಕಿಂಗ್ಸ್​ ಟ್ವೀಟ್​ ಮಾಡಿದೆ. ವೆಸ್ಟ್​ ಇಂಡೀಸ್​ ತಂಡದ ್ಯಾಬಿಯನ್​ ಅಲೆನ್​, ನ್ಯೂಜಿಲೆಂಡ್​ನ ಜಿಮ್ಮಿ ನೀಶಾಮ್​, ಆಸೀಸ್​ ತಂಡದ ಡೇವಿಡ್​ ವಾರ್ನರ್​, ಇಂಗ್ಲೆಂಡ್​ನ ಕ್ರಿಸ್​ ಜೋಡಾನ್​, ಪಂಜಾಬ್​ ಕಿಂಗ್ಸ್​ ತಂಡದ ಆಟಗಾರ ಮಂದೀಪ್​ ಸಿಂಗ್​ ಸೇರಿದಂತೆ ಹಲವು ಮಂದಿ ಟ್ವೀಟ್​ ಮೂಲಕ ಶುಭಾಶಯ ತಿಳಿಸಿದ್ದಾರೆ.

ಕೋವಿಡ್​ನಿಂದ ಸ್ಥಗಿತಗೊಂಡಿರುವ 14ನೇ ಐಪಿಎಲ್​ನಲ್ಲಿ ಪೂರನ್​ ರನ್​ ಬರ ಎದುರಿಸುತ್ತಿದ್ದರು. 7 ಪಂದ್ಯಗಳಿಂದ ಕೇವಲ 19 ರನ್​ ಸಿಡಿಸಲಷ್ಟೇ ಶಕ್ತರಾಗಿದ್ದರು. ಇದೀಗ ಬಿಸಿಸಿಐ 14ನೇ ಐಪಿಎಲ್​ನ ಉಳಿದ 31 ಪಂದ್ಯಗಳನ್ನು ಸೆಪ್ಟೆಂಬರ್​-ಅಕ್ಟೋಬರ್​ನಲ್ಲಿ ಯುಎಇಯಲ್ಲೇ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದೆ. ಸತತ ಎರಡು ದಿನ ಕೋವಿಡ್​-19 ಪ್ರಕರಣಗಳ ಪತ್ತೆಯಾದ ಹಿನ್ನೆಲೆಯಲ್ಲಿ ಮೇ 4 ರಂದು ಅನಿದಿರ್ಷ್ಟಾವಧಿವರೆಗೆ ಲೀಗ್​ ಮುಂದೂಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net