T20 Cricket: ಪೂರನ್ ವಿಶ್ವ ದಾಖಲೆ..ಮೊಹಮ್ಮದ್ ರಿಜ್ವಾನ್ ದಾಖಲೆ ಮುರಿದ ವೆಸ್ಟ್ ಇಂಡೀಸ್ ಪವರ್ ಹಿಟ್ಟರ್!

ಪೂರನ್ ವಿಶ್ವ ದಾಖಲೆ
pooran
Published on

ನವದೆಹಲಿ: ಕ್ರಿಕೆಟ್​ ಜಗತ್ತಿನಲ್ಲಿ ವೆಸ್ಟ್ ಇಂಡೀಸ್ ಪವರ್ ಹಿಟ್ಟರ್ ನಿಕೋಲಸ್ ಪೂರನ್ ಹೊಸ ದಾಖಲೆ ಬರೆದಿದ್ದಾರೆ. ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್ 2024 (ಸಿಪಿಎಲ್) ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಆಡುತ್ತಿರುವ ಪೂರನ್ ಟಿ20 ಕ್ರಿಕೆಟ್‌(T20 Cricket)ನಲ್ಲಿ ಈ ವರ್ಷ ರನ್ ಗಳ ಸುರಿಮಳೆಗೈದು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಅವರು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಶುಕ್ರವಾರ(ಸೆ.28) ಬಾರ್ಬಡೋಸ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪೂರನ್ 15 ಎಸೆತಗಳಲ್ಲಿ 27 ರನ್ ಗಳಿಸಿದರು. ಇದರೊಂದಿಗೆ ಮೊಹಮ್ಮದ್ ರಿಜ್ವಾನ್ (2,036 ರನ್, 45 ಇನ್ನಿಂಗ್ಸ್: 2021) ದಾಖಲೆ ಮುರಿದರು.

ನಿಕೋಲಸ್ ಪೂರನ್ ಈ ವರ್ಷ ಇದುವರೆಗೆ 65 ಇನ್ನಿಂಗ್ಸ್‌ಗಳಲ್ಲಿ 2,059 ರನ್ ಗಳಿಸಿದ್ದಾರೆ. ಅವರು T20 ಕ್ರಿಕೆಟ್​ನಲ್ಲಿ ವೆಸ್ಟ್ ಇಂಡೀಸ್, ಡರ್ಬನ್ ಸೂಪರ್ ಜೈಂಟ್ಸ್, ಲಕ್ನೋ ಸೂಪರ್ ಜೈಂಟ್ಸ್, ಎಂಐ ಎಮಿರೇಟ್ಸ್, ಎಂಐ ನ್ಯೂಯಾರ್ಕ್, ನಾರ್ದರ್ನ್ ಸೂಪರ್ ಚಾರ್ಜರ್ಸ್, ರಂಗ್‌ಪುರ್ ರೈಡರ್ಸ್, ಟ್ರಿನ್‌ಬಾಗೊ ನೈಟ್ ರೈಡರ್ಸ್ ಅನ್ನು ಪ್ರತಿನಿಧಿಸಿದರು ಮತ್ತು 14 ಅರ್ಧ ಶತಕ ಗಳಿಸಿದರು. ಎರಡು ಬಾರಿ 90ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

T20 Cricket ಹೆಚ್ಚು ರನ್ ಗಳಿಸಿದ ಆಟಗಾರರು:

ನಿಕೋಲಸ್ ಪೂರನ್- 2,059 ರನ್, 65 ಇನ್ನಿಂಗ್ಸ್ (2024); ಮೊಹಮ್ಮದ್ ರಿಜ್ವಾನ್ 2,036 ರನ್, 45 ಇನ್ನಿಂಗ್ಸ್ (2021); ಅಲೆಕ್ಸ್ ಹೇಲ್ಸ್- 1,946 ರನ್, 61 ಇನ್ನಿಂಗ್ಸ್ (2022); ಜೋಸ್ ಬಟ್ಲರ್ - 55 ಇನ್ನಿಂಗ್ಸ್‌ಗಳಲ್ಲಿ 1,833 ರನ್ (2023); ಮೊಹಮ್ಮದ್ ರಿಜ್ವಾನ್ - 1,817 ರನ್, 44 ಇನ್ನಿಂಗ್ಸ್ (2022)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net