ದಪ್ಪ ಆಗಿದ್ದೀಯ ಎಂದವರಿಗೆ ಆಬ್ಸ್ ತೋರಿಸಿ ಉತ್ತರ ಕೊಟ್ಟ ಖ್ಯಾತ ಫುಟ್ಬಾಲ್ ಆಟಗಾರ

abs pick
Published on

ನೀನು ತುಂಬಾ ದಪ್ಪ ಆಗಿದ್ದೀಯ ಎಂದವರಿಗೆ ಬ್ರೆಜಿಲ್ ದೇಶದ ಖ್ಯಾತ ಫುಟ್ಬಾಲ್ ಆಟಗಾರ ನೇಮರ್ ತಮ್ಮ ಆಬ್ಸ್ ತೋರಿಸಿ ಉತ್ತರ ಕೊಟ್ಟಿದ್ದಾರೆ.

ಬ್ರೆಜಿಲ್ ಫುಟ್ಬಾಲ್ ತಂಡದ ಫಾರ್ವರ್ಡ್ ವಿಭಾಗದಲ್ಲಿ ಪ್ರಮುಖ ಆಟಗಾರನಾಗಿರುವ ನೇಮರ್, ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಉತ್ತರ ನೀಡಿದ್ದಾರೆ. 29 ವರ್ಷದ ನೇಮರ್ ಗುರುವಾರ ಪೆರು ವಿರುದ್ಧ ಗೋಲು ಗಳಿಸಿದ ನಂತರ ಕ್ರೀಡಾಂಗಣದಲ್ಲೇ ತಮ್ಮ ಆಬ್ಸ್ ತೋರಿಸಿ ದಪ್ಪ ಆಗಿದ್ದೀಯ ಎಂದವರ ಬಾಯಿ ಮುಚ್ಚಿಸಿದ್ದಾರೆ.

"ಚುಬ್ಬಿ ಗುಡ್ ಅಟ್ ಬಾಲ್" ಎಂದು ಬರೆದುಕೊಂಡಿದ್ದಾರೆ. "ಅಭಿಮಾನಿಗಳು ನನ್ನನ್ನು ಗೌರವಿಸಲು ನಾನು ಇನ್ನೇನು ಮಾಡಬೇಕೆಂದು ನನಗೆ ಗೊತ್ತಿಲ್ಲ" ಎಂದು ಅವರು ಪಂದ್ಯದ ನಂತರ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net