ಹರ್ಬಲೈಫ್ ಇಂಡಿಯಾದ ವೃತಿಲೈಫ್ ಆಯುರ್ವೇದಿಕ್ ಸ್ಕಿನ್ ಕೇರ್ ಸರಣಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಸ್ಮೃತಿ ಮಂದನಾ ಮತ್ತು ಮಣಿಕಾ ಬಾತ್ರಾ ನೇಮಕ

New Project
Published on

ನವದೆಹಲಿ: ಪ್ರಮುಖ ಹೆಲ್ತ್ ಆಂಡ್ ವೆಲ್ನೆಸ್ ಕಂಪನಿ, ಸಮುದಾಯ ಮತ್ತು ವೇದಿಕೆಯಾಗಿರುವ ಹರ್ಬಲೈಫ್ ಇಂಡಿಯಾ ಇದೀಗ ತನ್ನ ಹೊಸ ವೃತಿಲೈಫ್ ಆಯುರ್ವೇದಿಕ್ ಸ್ಕಿನ್ ಕೇರ್ ಸರಣಿ ಉತ್ಪನ್ನಕ್ಕಾಗಿ ಬ್ರಾಂಡ್ ಅಂಬಾಸಿಡರ್ ಗಳನ್ನಾಗಿ ಭಾರತದ ಇಬ್ಬರು ಪ್ರಮುಖ ಕ್ರೀಡಾ ತಾರೆಗಳಾದ ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದನಾ ಮತ್ತು ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಮಾನಿಕಾ ಬಾತ್ರಾ ಅವರನ್ನು ನೇಮಕ ಮಾಡಿದೆ.

ಈ ಮೂಲಕ ಅವರೊಂದಿಗಿನ ತನ್ನ ಪಾಲುದಾರಿಕೆಯನ್ನು ವಿಸ್ತರಿಸುತ್ತಿರುವುದಾಗಿ ಘೋಷಿಸಿದೆ. ಈ ಕಾರ್ಯತಂತ್ರದ ಪಾಲುದಾರಿಕೆಯು ಕ್ಲಿನಿಕಲ್ ಆಗಿ ಪರೀಕ್ಷಿತಗೊಂಡ ಸ್ಕಿನ್ ಕೇರ್ ಉತ್ಪನ್ನಗಳ ಮೂಲಕ ಗ್ರಾಹಕರಿಗೆ ಪ್ರಯೋಜನ ಒದಗಿಸುವ ಗುರಿಯನ್ನು ಹೊಂದಿದ್ದು, ಎಲ್ಲರಿಗೂ ಕ್ಷೇಮವನ್ನು ಬಯಸುವ ಹರ್ಬಲೈಫ್‌ ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಹೆಚ್ಚಿನ ಶಾರೀರಿಕ ಮತ್ತು ವಾತಾವರಣ ಒತ್ತಡವನ್ನು ಎದುರಿಸುವ ಕ್ರೀಡಾಪಟುಗಳಾಗಿರುವ ಸ್ಮೃತಿ ಮಂದನಾ ಮತ್ತು ಮಣಿಕಾ ಬಾತ್ರಾ ಅವರು ತಮ್ಮ ಸಕ್ರಿಯವಾಗಿರುವ ಜೀವನಶೈಲಿಗೆ ನೆರವು ನೀಡುವ, ಗುಣಮಟ್ಟದ ಅಥವಾ ಅಧಿಕೃತತೆಯಲ್ಲಿ ಯಾವುದೇ ರಾಜಿ ಮಾಡದ ಉತ್ತಮ ಸ್ಕಿನ್ ಕೇರ್‌ ಉತ್ಪನ್ನದ ಮಹತ್ವವನ್ನು ಅರಿತಿದ್ದಾರೆ. ಈ ಪಾಲುದಾರಿಕೆಯು ಆಯುರ್ವೇದಿಕ್ ಸಂಪ್ರದಾಯವನ್ನು ಆಧುನಿಕ ವಿಜ್ಞಾನದ ಜೊತೆಗೆ ಸಂಯೋಜಿಸಿ, ಪ್ರತಿಯೊಬ್ಬರಿಗೂ ತಮ್ಮ ಚರ್ಮದ ಮೇಲೆ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಲು ಸಹಾಯ ಮಾಡುವ ಸ್ಕಿನ್ ಕೇರ್‌ ಉತ್ಪನ್ನವನ್ನು ಹೆಚ್ಚು ಜನರಿಗೆ ತಲುಪಿಸುವ ಒಂದು ಹಂಚಿಕೆಯ ದೃಷ್ಟಿಕೋನದಿಂದ ರೂಪುಗೊಂಡಿದೆ.

ಈ ಕುರಿತು ಮಾತನಾಡಿರುವ ಹರ್ಬಲೈಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ ಅವರು , “ವೃತಿಲೈಫ್ ಉತ್ಪನ್ನವು ಆಯುರ್ವೇದದ ತತ್ವಗಳಲ್ಲಿ ಬೇರೂರಿರುವ, ವಿಜ್ಞಾನದಿಂದ ಬೆಂಬಲಿತವಾದ ಸ್ಕಿನ್ ಕೇರ್‌ ಉತ್ಪನ್ನವನ್ನು ಒದಗಿಸುವ ನಮ್ಮ ನಿರಂತರ ಬದ್ಧತೆಯ ಪ್ರತಿರೂಪವಾಗಿದೆ. ಈ ಶ್ರೇಣಿಯನ್ನು ನಾವು ಅನಾವರಣ ಗೊಳಿಸುತ್ತಿರುವ ವೇಳೆಯಲ್ಲಿ ಈಗಾಗಲೇ ಹರ್ಬಲೈಫ್‌ ನ ಮೌಲ್ಯಯುತ ರಾಯಭಾರಿಗಳಾಗಿರುವ ಸ್ಮೃತಿ ಮಂದನಾ ಮತ್ತು ಮಣಿಕಾ ಬಾತ್ರಾ ಅವರನ್ನು ಈ ವೃತಿಲೈಫ್ ಸ್ಕಿನ್ ಕೇರ್ ಸರಣಿಗೂ ರಾಯಭಾರಿಯರನ್ನಾಗಿ ಮಾಡಿದ್ದು, ಈ ಕುರಿತು ಸಂತೋಷ ಹೊಂದಿದ್ದೇವೆ. ಅವರು ವೃತಿಲೈಫ್‌ ನ ಅವಿಭಾಜ್ಯವಾದ ಮೌಲ್ಯಗಳಾದ ಸಮತೋಲನ, ಶಕ್ತಿ, ಮತ್ತು ಸತ್ಯಾಸತ್ಯತೆಯನ್ನು ಪ್ರತಿಬಿಂಬಿಸುತ್ತಾರೆ. ಅವರ ಸ್ಫೂರ್ತಿದಾಯಕ ಪಯಣವು ಹೆಚ್ಚಿನ ಜನರಿಗೆ ಸ್ಕಿನ್ ಕೇರ್‌ ಉತ್ಪನ್ನವನ್ನು ಒಂದು ಸಶಕ್ತಗೊಳಿಸುವ ಅಂಶವಾಗಿ ಸ್ವೀಕರಿಸಲು ಪ್ರೇರೇಪಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದರು.

ವೃತಿಲೈಫ್‌ ನ ಆಯುರ್ವೇದಿಕ್ ಸ್ಕಿನ್ ಕೇರ್ ರೇಂಜ್ ಪ್ರಸ್ತುತ ಫೇಶಿಯಲ್ ಕ್ಲೆನ್ಸರ್, ಫೇಶಿಯಲ್ ಟೋನರ್, ಫೇಶಿಯಲ್ ಸೀರಮ್, ಮತ್ತು ಮಾಯಿಶ್ಚರೈಸರ್ ಅನ್ನು ಒಳಗೊಂಡಿದೆ. ಈ ಸ್ಕಿನ್ ಕೇರ್ ರೇಂಜ್ ನಲ್ಲಿ ನೀಮ್, ಅರಿಶಿನ, ಕುಂಕುಮಾದಿ ತೈಲ, ಮತ್ತು ಆಲೋವೆರಾದಂತಹ ಸಸ್ಯಜನ್ಯ ಸಾಮಾಗ್ರಿಗಳನ್ನು ಬಳಸಲಾಗಿದೆ. ಈ ಘಟಕಗಳನ್ನು ಡರ್ಮಟಾಲಾಜಿಕಲ್ ಆಗಿ ಪರೀಕ್ಷಿತ, ಪ್ಯಾರಬೆನ್- ಮುಕ್ತ, ಸಲ್ಫೇಟ್- ಮುಕ್ತ, ಮತ್ತು ಹೈಪೋಅಲರ್ಜೆನಿಕ್ ಆಕ್ಟಿವ್‌ ಗಳೊಂದಿಗೆ ಸಂಯೋಜಿಸಲಾಗಿದೆ. ಪ್ರತೀ ಫಾರ್ಮುಲೇಶನ್ ಅನ್ನು ಕಟ್ಟುನಿಟ್ಟಾದ ಕ್ಲಿನಿಕಲ್ ಮೌಲ್ಯೀಕರಣಕ್ಕೆ ಒಡ್ಡಲಾಗಿದೆ ಮತ್ತು ಹರ್ಬಲೈಫ್‌ ನ ಜಾಗತಿಕ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಪರಿಣಾಮ ಒದಗಿಸಲು ರಚಿಸಲಾಗಿದೆ. ಬೆಂಗಳೂರಿನ ಹರ್ಬಲೈಫ್‌ ನ ಸೆಂಟರ್ ಆಫ್ ಎಕ್ಸಲೆನ್ಸ್‌ ನಲ್ಲಿ ಅಭಿವೃದ್ಧಿಪಡಿಸಲಾದ ಈ ಉತ್ಪನ್ನಗಳು ಭಾರತಕ್ಕಾಗಿ ಮತ್ತು ಭಾರತದಲ್ಲಿ ತಯಾರಿಸಲ್ಪಟ್ಟಿದ್ದು, ಭಾರತೀಯ ಚರ್ಮದ ಪ್ರಕಾರಗಳಿಗೆ ತಕ್ಕಂತೆ ವಿಶೇಷವಾಗಿ ರೂಪಿಸಲಾಗಿದೆ.

ಈ ಕುರಿತು ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದನಾ ಅವರು , “ವೃತಿಲೈಫ್ ಕುಟುಂಬದ ಬ್ರಾಂಡ್ ಅಂಬಾಸಿಡರ್ ಆಗಿ ಸೇರಿರುವುದಕ್ಕೆ ನಾನು ಸಂತೋಷ ಹೊಂದಿದ್ದೇನೆ. ಕ್ರೀಡಾಪಟುವಾಗಿ, ನಿರಂತರವಾಗಿ ಸಕ್ರಿಯಳಾಗಿರುವ ವವಗೆ ನನ್ನ ಚರ್ಮದ ಆರೈಕೆ ಮಾಡುವುದು ಅತ್ಯಗತ್ಯವಾಗಿದೆ. ವೃತಿಲೈಫ್‌ ನ ಆಯುರ್ವೇದಿಕ್ ಆಧಾರಿತ ಫಾರ್ಮುಲೇಶನ್‌ ಗಳು ನನ್ನ ಜೀವನಶೈಲಿಗೆ ನಿಜವಾಗಿಯೂ ಹೊಂದಿಕೊಳ್ಳುತ್ತವೆ. ಕ್ಷೇಮ ಪಾಲನೆಗೆ ಪ್ರೇರಣೆ ಒದಗಿಸುವ ವಿಚಾರದಲ್ಲಿ ನಾನು ನಂಬಿಕೆ ಇಡುತ್ತೇನೆ ಮತ್ತು ವೃತಿಲೈಫ್ ಆ ತತ್ವವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.

ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಅವರು, “ಕ್ರೀಡೆಯಲ್ಲಿ ಮತ್ತು ಜೀವನದಲ್ಲಿ, ಶಿಸ್ತು ಮತ್ತು ಸ್ವ-ಆರೈಕೆ ಒಂದಕ್ಕೊಂದು ಪರಸ್ಪರ ಹೆಣೆದುಕೊಂಡಿವೆ. ವೃತಿಲೈಫ್‌ ಮೂಲಕ ಸಂಪ್ರದಾಯದಲ್ಲಿ ಆಳವಾಗಿ ಬೇರೂರಿರುವ ಮತ್ತು ಆಧುನಿಕವಾಗಿ ರಿಫ್ರೆಶಿಂಗ್ ಆಗಿರುವ ಸ್ಕಿನ್ ಕೇರ್‌ ಉತ್ಪನ್ನವನ್ನು ನಾನು ಕಂಡುಕೊಂಡಿದ್ದೇನೆ. ಈ ಬ್ರಾಂಡ್‌ ಅನ್ನು ಪ್ರತಿನಿಧಿಸಲು ಮತ್ತು ಈ ರಾಷ್ಟ್ರದ ವೈವಿಧ್ಯಮಯ ಸೌಂದರ್ಯ ಸಂಪ್ರದಾಯಗಳನ್ನು ಸಂಭ್ರಮಿಸಲು ನಾನು ಸಂತೋಷಪಡುತ್ತೇನೆ” ಎಂದು ಹೇಳಿದರು.

ಕಳೆದ 25 ವರ್ಷಗಳಿಂದ ಹರ್ಬಲೈಫ್ ಇಂಡಿಯಾ ರಾಷ್ಟ್ರದಾದ್ಯಂತ ಆರೋಗ್ಯ ಮತ್ತು ಕ್ಷೇಮವನ್ನು ಕಾಪಾಡಿಕೊಳ್ಳಲು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಆರಂಭದಿಂದಲೂ ವಿಜ್ಞಾನಿಕವಾಗಿ ಬೆಂಬಲಿತವಾದ ಪೌಷ್ಟಿಕತೆ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳ ಮೂಲಕ ವ್ಯಕ್ತಿಗಳು ಸಕ್ರಿಯ ಜೀವನವನ್ನು ನಡೆಸಲು ಸಶಕ್ತಗೊಳಿಸುವ ಉದ್ದೇಶವನ್ನು ಬ್ರಾಂಡ್ ಹೊಂದಿದೆ. ಹಲವು ವರ್ಷಗಳಲ್ಲಿ ಹರ್ಬಲೈಫ್ ಒಂದು ವಿಶ್ವಾಸಾರ್ಹ ಹೆಸರಾಗಿ ಬೆಳೆದಿದ್ದು, ಸಾವಿರಾರು ಸ್ವತಂತ್ರ ವಿತರಕರಿಗೆ ಬದುಕು ಒದಗಿಸಿದೆ ಮತ್ತು ಫಿಟ್‌ ನೆಸ್ ಹಾಗೂ ಕ್ಷೇಮ ಪಾಲನೆಯಲ್ಲಿ ತೊಡಗಿರುವ ಜನ ಸಮುದಾಯವನ್ನು ನಿರ್ಮಿಸಿದೆ. ಗುಣಮಟ್ಟ, ಹೊಸತನ ಮತ್ತು ಗ್ರಾಹಕ ಕೇಂದ್ರಿತ ಉತ್ಪನ್ನ ರಚನೆ ಮೇಲೆ ಗಮನವನ್ನು ಹೊಂದಿರುವ ಹರ್ಬಲೈಫ್ ಕಂಪಿಯು ಭಾರತದ ಹೆಲ್ತ್ ಮತ್ತು ವೆಲ್ನೆಸ್ ಕ್ಷೇತ್ರದಲ್ಲಿ ನಾಯಕನಾಗಿ ತನ್ನ ಪರಂಪರೆಯನ್ನು ಗಟ್ಟಿಗೊಳಿಸುತ್ತಾ ಸಾಗಿದೆ, ಧನಾತ್ಮಕ ಜೀವನಶೈಲಿ ಬದಲಾವಣೆಗಳಿಗೆ ಸ್ಫೂರ್ತಿ ನೀಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net