ಟೀಮ್​ ಇಂಡಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕಿವೀಸ್​ ಸಹಾಯಕ ಕೋಚ್​​ ಫೀಲ್ಡಿಂಗ್​ ಮಾಡಿದ್ದೇಕೆ?

Luke Ronchi
Published on

ಆಕ್ಲೆಂಡ್​: ಶನಿವಾರ ಇಲ್ಲಿನ ಈಡನ್​ ಪಾರ್ಕ್​ನಲ್ಲಿ ನಡೆದ ಪ್ರವಾಸಿ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕಿವೀಸ್​ ಸಹಾಯಕ ಕೋಚ್​​ ಲ್ಯುಕ್ ರೊಂಚಿ ಫೀಲ್ಡಿಂಗ್​ ಮಾಡುವ ಮೂಲಕ ಗಮನ ಸೆಳದರು.

ಟೀಮ್​ ಸೌಥಿ ಅನಾರೋಗ್ಯ ಕಾರಣ ಅವರ ಸ್ಥಾನವನ್ನು ತುಂಬಲು ಯಾವೊಬ್ಬ ಕಿವೀಸ್​ ಆಟಗಾರನು ಫಿಟ್​ ಆಗಿರದೇ ಇದ್ದುದ್ದರಿಂದ ಲ್ಯುಕ್ ರೊಂಚಿ ಅವರೇ ಬದಲಿ ಫೀಲ್ಡರ್​ ಆಗಿ ಕ್ರೀಡಾಂಗಣಕ್ಕೆ ಇಳಿದರು.

ಸೌಥಿ ಗಾಯಗೊಂಡಿದ್ದರಿಂದ ಸ್ಕಾಟ್​ ಕುಗ್ಗೆಲಿನ್​ ಮತ್ತು ಮಿಚೆಲ್​ ಸ್ಯಾಂಟ್ನರ್​ ಅವರನ್ನು ಫೀಲ್ಡಿಂಗ್​ಗೆ ಇಳಿಸಬಹುದಿತ್ತು. ಆದರೆ, ಅವರಿಬ್ಬರಿಗೂ ಜ್ವರ ಮತ್ತು ಉದರ ಸಂಬಂಧ ತೊಂದರೆ ಇದ್ದ ಕಾರಣದಿಂದಾಗಿ ಬದಲಿ ಫೀಲ್ಡರ್​​ ಆಗಿ ಕ್ರೀಡಾಂಗಣಕ್ಕೆ ಇಳಿಸಲು ಸಾಧ್ಯವಾಗಲಿಲ್ಲ.

ಅನಾರೋಗ್ಯ ಕಾರಣ ಸೌಥಿ ಪ್ರಾರಂಭದಲ್ಲೇ ತಮ್ಮ 10 ಓವರ್​ಗಳನ್ನು ಎಸೆದು ವಿಶ್ರಾಂತಿಗಾಗಿ ಕ್ರೀಡಾಂಗಣ ತ್ಯಜಿಸಿದರು. ಆದರೆ, ಅವರ ಸ್ಥಾನ ತುಂಬಲು ಯಾವೋಬ್ಬ ಆಟಗಾರರನು ಇಲ್ಲದಿದ್ದಾಗ ತಂಡದ ಸಹಾಯಕ ಕೋಚ್​ ಲ್ಯುಕ್ ರೊಂಚಿ ಅವರೇ ಮೈದಾನಕ್ಕೆ ಇಳಿದರು.

ಅಂದಹಾಗೆ 38 ವರ್ಷದ ಲ್ಯುಕ್ ರೊಂಚಿ ಅವರು ವಿಕೆಟ್​ ಕೀಪರ್​ ಹಾಗೂ ಬ್ಯಾಟ್​​ಮನ್​ ಆಗಿದ್ದು, ಕೊನೆಯ ಬಾರಿಗೆ 2017ರಲ್ಲಿ ಕಿವೀಸ್​ ತಂಡವನ್ನು ಪ್ರತಿನಿಧಿಸಿದ್ದರು. ಈಗ ಕೋಚ್​ ಆಗಿದ್ದಾರೆ.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ಭಾರತ ವಿರುದ್ಧ ಕಿವೀಸ್​ ಎರಡನೇ ಏಕದಿನ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳಲ್ಲಿ 2-0 ಅಂತರದಿಂದ ಮುನ್ನೆಡೆ ಕಾಯ್ದುಕೊಳ್ಳುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net