

ತರೌಬ: ವೇಗಿಗಳಾದ ಟಿಮ್ ಸೌಥಿ (4ಕ್ಕೆ3) ಹಾಗೂ ಟ್ರೆಂಟ್ ಬೌಲ್ಟ್ (7ಕ್ಕೆ 2) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ನ್ಯೂಜಿಲೆಂಡ್ ತಂಡ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕ್ರಿಕೆಟ್ ಶಿಶು ಉಗಾಂಡ ಎದುರು 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಸೂಪರ್-8 ರೇಸ್‌ನಿಂದ ಹೊರಬಿದ್ದಿರುವ ಕೇನ್ ವಿಲಿಯಮ್ಸನ್ ಪಡೆಗೆ ಇದು ಟೂರ್ನಿಯಲ್ಲಿ ಮೊದಲ ಜಯವಾಗಿದೆ.
ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಉಗಾಂಡ, ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ 18.4 ಓವರ್‌ಗಳಲ್ಲಿ ಕೇವಲ 40 ರನ್‌ಗಳಿಗೆ ಆಲೌಟ್ ಆಯಿತು. ಇದು ಟಿ20 ವಿಶ್ವಕಪ್‌ನಲ್ಲಿ ದಾಖಲಾದ ತಂಡವೊಂದರ 2ನೇ ಕನಿಷ್ಠ ಮೊತ್ತವಾಗಿದೆ. ಪ್ರತಿಯಾಗಿ ಕಿವೀಸ್, 5.2 ಓವರ್‌ಗಳಲ್ಲಿ 1 ವಿಕೆಟ್‌ಗೆ 41 ರನ್ ಗಳಿಸಿ ಸಮಾಧಾನಕರ ಗೆಲುವು ದಕ್ಕಿಸಿಕೊಂಡಿತು.
ಉಗಾಂಡ: 18.4 ಓವರ್‌ಗಳಲ್ಲಿ 40 (ರೋನಾಕ್ 2, ಕಿನ್ನತ್ 11, ರಿಯಾಜತ್ 2, ದಿನೇಶ್ 4, ಮಸಾಬ 3, ಟಿಮ್ ಸೌಥಿ 4ಕ್ಕೆ3, ಬೌಲ್ಟ್ 7ಕ್ಕೆ 2, ಸ್ಯಾಂಟ್ನರ್ 8ಕ್ಕೆ 2, ರಚಿನ್ 9ಕ್ಕೆ 2). ನ್ಯೂಜಿಲೆಂಡ್: 5.2 ಓವರ್‌ಗಳಲ್ಲಿ 41(ಫಿನ್ ಆಲೆನ್ 9, ಕಾನ್‌ವೇ 22*, ರಚಿನ್ 1*). ಪಂದ್ಯಶ್ರೇಷ್ಠ: ಟಿಮ್ ಸೌಥಿ.
10: ನ್ಯೂಜಿಲೆಂಡ್ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಹೊರಬಿದ್ದಿದೆ.