

ಹಾಮಿಲ್ಟನ್: ಆರಂಭಿಕ ಫಿನ್ ಅಲೆನ್ (74 ರನ್, 41 ಎಸೆತ, 7 ಬೌಂಡರಿ, 5 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ತಂಡ ಎರಡನೇ ಟಿ20 ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ಎದುರು 21 ರನ್ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಕೇನ್ ವಿಲಿಯಮ್ಸನ್ ಬಳಗ ಐದು ಪಂದ್ಯಗಳ ಸರಣಿಯಲ್ಲಿ 2&0 ಮುನ್ನಡೆ ಕಂಡಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ 8 ವಿಕೆಟ್ಗೆ 194 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಬಾಬರ್ ಅಜಮ್ (66 ರನ್, 43 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಖರ್ ಜಮಾನ್ (50 ರನ್, 25 ಎಸೆತ, 3 ಬೌಂಡರಿ, 5 ಸಿಕ್ಸರ್) ಅವಳಿ ಅರ್ಧಶತಕಗಳ ನಡುವೆಯೂ ಪಾಕಿಸ್ತಾನ 19.3 ಓವರ್ಗಳಲ್ಲಿ 173 ರನ್ಗಳಿಗೆ ಸರ್ವಪತನ ಕಂಡಿತು. ವೇಗಿ ಆಡಂ ಮಿಲ್ನೆ (33ಕ್ಕೆ 4) ಪಾಕ್ಗೆ ಕಡಿವಾಣ ಹೇರಿದರು. ಮೂರನೇ ಟಿ20 ಪಂದ್ಯ ಬುಧವಾರ ನಡೆಯಲಿದೆ.
ನ್ಯೂಜಿಲೆಂಡ್: 8 ವಿಕೆಟ್ಗೆ 194 (ಅಲೆನ್ 74, ವಿಲಿಯಮ್ಸನ್ 26, ಡೆರಿಲ್ 17, ಸ್ಯಾಂಟ್ನರ್ 25, ಹ್ಯಾರಿಸ್ ರ್ೌ 38ಕ್ಕೆ 3, ಅಬ್ಬಾಸ್ ಅಫ್ರಿದಿ 43ಕ್ಕೆ 2). ಪಾಕಿಸ್ತಾನ: 19.3 ಓವರ್ಗಳಲ್ಲಿ 173 (ರಿಜ್ವಾನ್ 7, ಬಾಬರ್ 66, ಖರ್ 50, ಶಹೀನ್ ಷಾ ಅಫ್ರಿದಿ 22, ಆಡಂ ಮಿಲ್ನೆ 33ಕ್ಕೆ 4, ಬೆನ್ ಸಿರ್ಸ್ 28ಕ್ಕೆ 2). ಪಂದ್ಯಶ್ರೇಷ್ಠ: ಫಿನ್ ಅಲೆನ್.