ಫೈನಲ್​ಗೇರಿದ ನ್ಯೂಜಿಲೆಂಡ್​; ಮಹಿಳಾ ಟಿ20 ವಿಶ್ವಕಪ್​ನಲ್ಲಿ ಈ ಬಾರಿ ಹೊಸ ಚಾಂಪಿಯನ್​ ಖಚಿತ!

web nz wc
Published on

ಶಾರ್ಜಾ: ಸಂಟಿತ ಬೌಲಿಂಗ್​ ದಾಳಿ ನಡೆಸಿದ ನ್ಯೂಜಿಲೆಂಡ್​ ತಂಡ ಮಹಿಳಾ ಟಿ20 ವಿಶ್ವಕಪ್​ ಟೂರ್ನಿಯ 2ನೇ ಸೆಮಿಫೈನಲ್​ ಪಂದ್ಯದಲ್ಲಿ ಮಾಜಿ ಚಾಂಪಿಯನ್​ ವೆಸ್ಟ್​ ಇಂಡೀಸ್​ ವಿರುದ್ಧ 8 ರನ್​ಗಳಿಂದ ರೋಚಕ ಗೆಲುವು ಸಾಧಿಸಿ 3ನೇ ಬಾರಿ ಮತ್ತು 14 ವರ್ಷಗಳ ಬಳಿಕ ಫೈನಲ್​ಗೇರಿದೆ. ಭಾನುವಾರ ನಡೆಯಲಿರುವ ಪ್ರಶಸ್ತಿ ಕದನದಲ್ಲಿ ದಕ್ಷಿಣ ಆಫ್ರಿಕಾ-ನ್ಯೂಜಿಲೆಂಡ್​ ಮುಖಾಮುಖಿ ಆಗಲಿದ್ದು, ಯಾರೇ ಗೆದ್ದರೂ ಮೊದಲ ಬಾರಿ ಚಾಂಪಿಯನ್​ ಪಟ್ಟವೇರಲಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ನ್ಯೂಜಿಲೆಂಡ್​, ಉತ್ತಮ ಆರಂಭದ ನಡುವೆಯೂ ಮಧ್ಯಮ ಕ್ರಮಾಂಕದ ಕುಸಿತದಿಂದ 9 ವಿಕೆಟ್​ಗೆ 128 ರನ್​ ಗಳಿಸಿತು. ಪ್ರತಿಯಾಗಿ ವಿಂಡೀಸ್​ 8 ವಿಕೆಟ್​ಗೆ 120 ರನ್​ ಗಳಿಸಲಷ್ಟೇ ಶಕ್ತವಾಯಿತು. ನ್ಯೂಜಿಲೆಂಡ್​ ಈ ಮುನ್ನ 2009, 2010ರಲ್ಲಿ ಫೈನಲ್​ಗೇರಿ ನಿರಾಸೆ ಅನುಭವಿಸಿತ್ತು.

ನ್ಯೂಜಿಲೆಂಡ್​: 7 ವಿಕೆಟ್​ಗೆ 128 (ಬೇಟ್ಸ್​ 26, ಪ್ಲಿಮ್ಮರ್​ 33, ಕೆರ್​ 7, ಡಿವೈನ್​ 12, ಹಾಲಿಡೇ 18, ಗೇಜ್​ 20*, ಡಾಟಿನ್​ 22ಕ್ಕೆ 4, ಆಫಿ ಫ್ಲೆಚರ್​ 23ಕ್ಕೆ 2, ಕರಿಶ್ಮಾ 11ಕ್ಕೆ 1). ವೆಸ್ಟ್​ ಇಂಡೀಸ್​: 8 ವಿಕೆಟ್​ಗೆ 120 (ಮ್ಯಾಥ್ಯೂಸ್​ 15, ಸ್ಟೆಾನಿ 13, ಡಾಟಿನ್​ 33, ಫ್ಲೆಚರ್​ 17*, ಕರ್ಸನ್​ 29ಕ್ಕೆ 3, ಕೆರ್​ 14ಕ್ಕೆ 2, ತಹುಹು 33ಕ್ಕೆ 1).

ಭಾನುವಾರ ಫೈನಲ್​

ದಕ್ಷಿಣ ಆಫ್ರಿಕಾ-ನ್ಯೂಜಿಲೆಂಡ್

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net