ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್: ಭಾರತಕ್ಕೆ 25 ವರ್ಷಗಳ ಹಿಂದಿನ ಲೆಕ್ಕ ಚುಕ್ತಾ ಮಾಡುವ ಅವಕಾಶ!

New Project
Published on

ಲಾಹೋರ್: ಬೆಂಗಳೂರು ಮೂಲದ ಆಲ್ರೌಂಡರ್ ರಚಿನ್ ರವೀಂದ್ರ (108 ರನ್, 101 ಎಸೆತ, 13 ಬೌಂಡರಿ, 1 ಸಿಕ್ಸರ್ ಹಾಗೂ 20ಕ್ಕೆ 1 ವಿಕೆಟ್) ಸಿಡಿಸಿದ 5ನೇ ಶತಕ ಹಾಗೂ ಅನುಭವಿ ಕೇನ್ ವಿಲಿಯಮ್ಸನ್ (102 ರನ್, 94 ಎಸೆತ ,10 ಬೌಂಡರಿ, 2 ಸಿಕ್ಸರ್) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾರಿಸಿದ 48ನೇ ಸೆಂಚುರಿ ನೆರವಿನಿಂದ ರನ್‌ಮಳೆ ಹರಿಸಿದ ನ್ಯೂಜಿಲೆಂಡ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಎದುರು 50 ರನ್‌ಗಳ ಗೆಲುವು ದಾಖಲಿಸಿ, ಮೂರನೇ ಬಾರಿ ೈನಲ್‌ಗೆ ಲಗ್ಗೆಯಿಟ್ಟಿದೆ. ಭಾನುವಾರ ಹಾಲಿ ರನ್ನರ್ ಅಪ್ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

ಗಡಾಫಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎರಡನೇ ಸೆಮಿೈನಲ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಕಿವೀಸ್, ಸಾಧಾರಣ ಆರಂಭದ ನಡುವೆಯೂ 25 ವರ್ಷದ ರಚಿನ್ ರವೀಂದ್ರ ಹಾಗೂ 34 ವರ್ಷದ ಕೇನ್ ವಿಲಿಯಮ್ಸನ್ ನಡೆಸಿದ ಭರ್ಜರಿ ಜತೆಯಾಟದ ಜತೆಗೆ ಸ್ಲಾಗ್ ಓವರ್‌ಗಳಲ್ಲಿ ಡೆರಿಲ್ ಮಿಚೆಲ್ (49), ಗ್ಲೆನ್ ಫಿಲಿಪ್ಸ್ (49*) ಬಿರುಸಿನಾಟದ ಬಲದಿಂದ 6 ವಿಕೆಟ್‌ಗೆ 362 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ನಾಯಕ ಟೆಂಬಾ ಬವುಮಾ (56 ರನ್, 71 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ರಸ್ಸಿ ವ್ಯಾನ್ ಡರ್ ಡುಸೆನ್ (69 ರನ್, 66 ಎಸೆತ, 4 ಬೌಂಡರಿ, 2 ಸಿಕ್ಸರ್) ಹರಿಣಗಳ ಹೋರಾಟ ಜೀವಂತವಿರಿಸಿದರು. ನಂತರ ಮಿಚೆಲ್ ಸ್ಯಾಂಟ್ನರ್ (29ಕ್ಕೆ 3) ಸಹಿತ ಸ್ಪಿನ್ನರ್‌ಗಳ ದಾಳಿಗೆ ಕುಸಿದ ದ.ಆಫ್ರಿಕಾ ಡೇವಿಡ್ ಮಿಲ್ಲರ್ (100* ರನ್, 67 ಎಸೆತ, 10 ಬೌಂಡರಿ, 4 ಸಿಕ್ಸರ್) ಶತಕದ ಹೋರಾಟದ ನಡುವೆಯೂ ಅಂತಿಮವಾಗಿ 9 ವಿಕೆಟ್‌ಗೆ 312 ರನ್‌ಗಳಿಗ ಶಕ್ತಗೊಂಡಿತು. ಇದರೊಂದಿಗೆ ನ್ಯೂಜಿಲೆಂಡ್ ತಂಡ 16 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೇರಿದ ಸಾಧನೆ ಮಾಡಿತು.

ನ್ಯೂಜಿಲೆಂಡ್: 6 ವಿಕೆಟ್‌ಗೆ 362 (ವಿಲ್ ಯಂಗ್ 21, ರಚಿನ್ ರವೀಂದ್ರ 108, ವಿಲಿಯಮ್ಸನ್ 102, ಡೆರಿಲ್ ಮಿಚೆಲ್ 49, ಲಾಥಮ್ 4, ಫಿಲಿಪ್ಸ್ 49*, ಬ್ರೇಸ್‌ವೆಲ್ 16, ಸ್ಯಾಂಟ್ನರ್ 2*, ಎನ್‌ಗಿಡಿ 72ಕ್ಕೆ 3, ರಬಾಡ 70ಕ್ಕೆ 2). ದಕ್ಷಿಣ ಆಫ್ರಿಕಾ: 9 ವಿಕೆಟ್‌ಗೆ 312 (ರಿಕೆಲ್‌ಟನ್ 17, ಬವುಮಾ 56, ವ್ಯಾನ್ ಡರ್ ಡುಸೆನ್ 69, ಮಾರ್ಕ್ರಮ್ 31, ಕ್ಲಾಸೆನ್ 3, ಮಿಲ್ಲರ್ 100*, ಮುಲ್ಡರ್ 8, ಜಾನ್ಸೆನ್ 8, ಕೇಶವ 1, ರಬಾಡ 16, ಸ್ಯಾಂಟ್ನರ್ 43ಕ್ಕೆ 3, ಫಿಲಿಪ್ಸ್ 27ಕ್ಕೆ 2).

ಭಾರತಕ್ಕೆ 25 ವರ್ಷಗಳ ಹಿಂದಿನ ಲೆಕ್ಕ ಚುಕ್ತಾ ಮಾಡುವ ಅವಕಾಶ!

ನ್ಯೂಜಿಲೆಂಡ್ ತಂಡ ೈನಲ್‌ಗೇರುವುದರೊಂದಿಗೆ ಭಾರತಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 25 ವರ್ಷಗಳ ಹಿಂದಿನ ಲೆಕ್ಕ ಚುಕ್ತಾ ಮಾಡುವ ಅವಕಾಶ ಲಭಿಸಿದೆ. 2000ದ 2ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ (ಆಗ ಐಸಿಸಿ ನಾಕೌಟ್ ಕಪ್) ೈನಲ್‌ನಲ್ಲಿ ಭಾರತ ತಂಡ ಕಿವೀಸ್ ಎದುರು 4 ವಿಕೆಟ್‌ಗಳಿಂದ ಸೋತಿತ್ತು. ನಂತರ 2021ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ೈನಲ್ ಪಂದ್ಯದಲ್ಲೂ ಭಾರತ ತಂಡ ನ್ಯೂಜಿಲೆಂಡ್ ಎದುರು ಸೋತಿತ್ತು. ಕಿವೀಸ್ ಗೆದ್ದಿರುವ 2 ಐಸಿಸಿ ಟೂರ್ನಿಗಳಲ್ಲೂ ಭಾರತ ವಿರುದ್ಧವೇ ೈನಲ್‌ನಲ್ಲಿ ಜಯಿಸಿದೆ. ಹೀಗಾಗಿ ರೋಹಿತ್ ಶರ್ಮ ಪಡೆ ಈ ಬಾರಿ ಎಚ್ಚರಿಕೆಯಿಂದ ೈನಲ್ ಆಡಬೇಕಿದೆ. ಕಳೆದ ವರ್ಷ ಟಿ20 ವಿಶ್ವಕಪ್ ಸೆಮೀಸ್‌ನಲ್ಲಿ ಕಿವೀಸ್ ತಂಡವನ್ನು ಮಣಿಸಿದ ವಿಶ್ವಾಸ ಭಾರತಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net