ಭಾರತದ ತಪ್ಪಾದ ನಕ್ಷೆ ಬಳಸಿದ ನ್ಯೂಜಿಲೆಂಡ್​ ಕ್ರಿಕೆಟ್​ ಮಂಡಳಿ; ಭಾರತೀಯ ಫ್ಯಾನ್ಸ್​ ಕಿಡಿ

web nz map
Published on

ಪುಣೆ: ಬೆಂಗಳೂರು ಟೆಸ್ಟ್​ ಗೆಲುವಿನ ಬಳಿಕ ಭಾರತದ ತಪ್ಪಾದ ನಕ್ಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನ್ಯೂಜಿಲೆಂಡ್​ ಕ್ರಿಕೆಟ್​ ಮಂಡಳಿಯ (ಎನ್​ಝಡ್​ಸಿ) ವಿರುದ್ಧ ಭಾರತೀಯ ಕ್ರಿಕೆಟ್​ ಪ್ರೇಮಿಗಳು ಕಿಡಿಕಾರಿದ್ದಾರೆ.

ಕಿವೀಸ್​ ತಂಡ 2ನೇ ಟೆಸ್ಟ್​ಗಾಗಿ ಪುಣೆಗೆ ಪ್ರಯಾಣಿಸುತ್ತಿದೆ ಎಂದು ಪ್ರಕಟಿಸುವ ಪೋಸ್ಟ್​ನಲ್ಲಿ ಎನ್​ಝಡ್​ಸಿ, ಪ್ರಮುಖವಾಗಿ ಜಮ್ಮು-ಕಾಶ್ಮೀರ ಮತ್ತು ಲಡಾಖ್​ನ ಗಡಿಗಳನ್ನು ಸರಿಯಾಗಿ ತೋರಿಸಿರದ ನಕ್ಷೆಯನ್ನು ಬಳಸಿದೆ. ಈಶಾನ್ಯ ರಾಜ್ಯಗಳ ಗಡಿಯನ್ನೂ ತಪ್ಪಾಗಿ ತೋರಿಸಲಾಗಿತ್ತು. ಇದಕ್ಕೆ ಭಾರತೀಯರು ಕಟುವಾಗಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ಎನ್​ಝಡ್​ಸಿ, ಈ ಪೋಸ್ಟ್​ ಡಿಲೀಟ್​ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net